RECIPE| ಅದ್ಭುತ ರುಚಿಯ ಚೀನೀ ಸಲಾಡ್ ಫಟಾ ಫಟ್‌ ರೆಡಿ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅದ್ಭುತ ರುಚಿಯ ಚೀನೀ ಸಲಾಡ್‌ ಫಟಾ ಫಟ್‌ ರೆಡಿ ಮಾಡಬಹುದು. ಅದು ಹೇಗೆ ಅಂತೀರಾ…ಇಲ್ಲಿದೆ ರೆಸಿಪಿ.

ಬೇಕಾಗುವ ಸಾಮಾಗ್ರಿ:

ಹತ್ತು ಹುರುಳಿಕಾಯಿ (ಬೀನ್ಸ್), 2ಕ್ಯಾರೆಟ್‌, ಒಂದು ಟೊಮೆಟೋ, ಸ್ಲೈಸ್‌ಮಾಡಿದ ಅನನಾಸ್‌ 5 ತುಂಡುಗಳು, ರುಚಿಗೆ ಬೇಕಾದಷ್ಟು ಉಪ್ಪು, ಖಾರಾಪುಡಿ, ನಿಂಬೆರಸ.

ಮಾಡುವ ವಿಧಾನ:

ಬೀನ್ಸ್‌ಹಾಗೂ ಕ್ಯಾರೆಟ್‌ಗಳನ್ನು ಎರಡು ಇಂಚು ಉದ್ದಕ್ಕೆ ಹೆಚ್ಚಿಟ್ಟಿಕೊಳ್ಳಿ. ಟೊಮೆಟೋ ಹಣ್ಣನ್ನು ಸಣ್ಣ ಸಣ್ಣ ಕ್ಯೂಬ್‌ಗಳಾಗಿ ಕತ್ತರಿಸಿಟ್ಟುಕೊಳ್ಳಿ. ಸಲಾಡ್‌ಟ್ರೇಯಲ್ಲಿ ಅಂದವಾಗಿ ಜೋಡಿಸಿಡಿ. ಮಧ್ಯದಲ್ಲಿ ಟೊಮೆಟೋ ಪೇರಿಸಿ. ಅಲಂಕರಿಸಿದ ನಂತರ ಉಪ್ಪು ಹಾಗೂ ಖಾರ ಹುಡಿಗಳನ್ನು ಉದುರಿಸಿ. ನಿಂಬೆಹಣ್ಣಿನ ರಸವನ್ನು ಸೇರಿಸಿಕೊಳ್ಳಿ. ಅದ್ಭುತ ರುಚಿಯ ಚೀನೀ ಸಲಾಡ್‌ ರೆಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!