ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯಗೆ ದೊಡ್ ಸಮಸ್ಯೆ ಯಾವ್ದು ಗೊತ್ತಾ? ಸದಾ ಪಕ್ದಲ್ಲೇ ಇರೋ ʼಬಂಡೆʼ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ಗೆ ಟಾಂಗ್ ನೀಡಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಆಯೋಜಿಸಿರುವ ಪಾದಯಾತ್ರೆಯ ಕೊನೆಯ ದಿನ ಮೈಸೂರಿನಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಉತ್ತಮವಾಗಿ ಜನಬೆಂಬಲ ಸಿಕ್ಕಿದೆ ಎಂದರು.
ಸಿದ್ದರಾಮಯ್ಯನ ಹಿಂದೆ ಬಂಡೆ ಇದೆ ಎಂದು ಡಿಸಿಎಂ ಡಿಕೆ ಹೇಳಿದ್ದಾರೆ. ಈ ಬಂಡೆಯೇ ಸಿದ್ದರಾಮಯ್ಯಗೆ ಪ್ರಾಬ್ಲಂ. ಮುಖವಾಡ ಹಾಕಿ ಒಳಗೊಂದು ಹೊರಗೊಂದು ಮಾತನಾಡುತ್ತಿದ್ದಾರೆ. ಈಗಾಗಲೇ ಬಂಡೆ ಸಿಎಂ ಕುರ್ಚಿಗೆ ಟವೆಲ್ ಹಾಕಿಕೊಂಡು ಕುಳಿತಿದೆ. ಬಂಡೆ ಯಾವಾಗ ಬೇಕಾದರೂ ಸಿದ್ದರಾಮಯ್ಯ ಮೇಲೆ ಬೀಳಬಹುದು ಎಂದು ನಿಖಿಲ್ ಹೇಳಿದರು.