HEALTH | ದಿನವೂ ಮೊಸರು+ಸಕ್ಕರೆ ತಿನ್ನೋದ್ರಿಂದ ತೂಕ ಹೆಚ್ಚಾಗುತ್ತದಾ?

ಸಾಮಾನ್ಯವಾಗಿ ಶುಭ ಕೆಲಸಗಳಿಗೆ ಹೋಗುವಾಗ ಮೊಸರು ಸಕ್ಕರೆ ತಿನ್ನಿಸ್ತಾರೆ, ಇನ್ನು ಹಲವರು ಮೊಸರಿನ ಜೊತೆ ಸಕ್ಕರೆ ಹಾಕಿಕೊಂಡು ತಿನ್ನೋಕೆ ಇಷ್ಟಪಡ್ತಾರೆ. ಇದು ಟೇಸ್ಟಿ ಕೂಡ ಹೌದು. ಆದರೆ ಕೆಲವರು ಮಾತ್ರ ತಿನ್ನೋಕೆ ಇಷ್ಟ ಇದ್ರೂ ತಿನ್ನೋದಿಲ್ಲ, ಯಾಕಂದ್ರೆ ಮೊಸರು ಸಕ್ಕರೆ ದಿನವೂ ತಿಂದರೆ ತೂಕ ಹೆಚ್ಚಾಗ್ಬಿಡಬಹುದು ಅನ್ನೋ ಭಯ.

ಈ ಭಯ ಇದ್ರೆ ನೀವಿದನ್ನು ಓದಲೇಬೇಕು. ನಿಮ್ಮ ಆಲೋಚನೆ ಸರಿಯಾಗಿದೆ. ಮೊಸರನ್ನು ತಿನ್ನೋದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಆದರೆ ಮೊಸರಿನ ಜೊತೆ ಸಕ್ಕರೆ ಸೇರಿಸಿದಾಗ ಕ್ಯಾಲೊರಿ ಸೇರಿಕೊಳ್ಳುತ್ತದೆ.

ಅಲ್ಲದೇ ಮೊಸರು ಸಕ್ಕರೆ ತಿಂದವರಲ್ಲಿ ಹಸಿವು ಹೆಚ್ಚಾಗಿ ಇನ್ನಷ್ಟು ತಿನ್ನೋಣ ಎನಿಸುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣ ಆಗಬಹುದು.

ಮೊಸರು ಸಕ್ಕರೆ ತಿನ್ನುವುದರಿಂದ ತಕ್ಷಣ ಮೂಡ್ ಚೆನ್ನಾಗಿ ಆಗುತ್ತದೆ. ಮೆದುಳಿಗೆ ಗ್ಲುಕೋಸ್ ಸಪ್ಲೇ ಆಗಿ ಎನರ್ಜಿ ಲೆವೆಲ್ ಹೆಚ್ಚಾಗುತ್ತದೆ ಎಂದೂ ಹೇಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!