PARENTING | ಮಗನಿಗೆ ಗರ್ಲ್‌ಫ್ರೆಂಡ್ ಇದ್ದಾಳಾ? ಈ ಬದಲಾವಣೆ ಆಗಿದ್ಯಾ ಗಮನಿಸಿ..

ಮಕ್ಕಳ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿಯೋದು ಮುಖ್ಯ, ಆದರೆ ಈಗಿನ ಮಕ್ಕಳು ತಂದೆ ತಾಯಿಯ ಜೊತೆ ಲವ್, ಅಟ್ರಾಕ್ಷನ್ ಹಾಗೂ ಸೆಕ್ಸ್ ಬಗ್ಗೆ ಮಾತನಾಡುವುದನ್ನು ಇಷ್ಟಪಡುವುದಿಲ್ಲ. ತಂದೆ ತಾಯಿ ಜೊತೆ ಮಾತುಕತೆ ಅವರಿಗೆ ಕಂಫರ್ಟ್ ಎನಿಸುವುದಿಲ್ಲ. ಕೆಲವೊಮ್ಮೆ ಪ್ರೀತಿಯಲ್ಲಿ ಅತಿರೇಕದ ನಿರ್ಣಯಗಳನ್ನು ಮಕ್ಕಳು ತೆಗೆದುಕೊಳ್ಳುತ್ತಾರೆ. ಪ್ರೀತಿಗೂ ಆಕರ್ಷಣೆಗೂ ವ್ಯತ್ಯಾಸ ಗೊತ್ತಿಲ್ಲದೆ ವರ್ತಿಸುತ್ತಾರೆ.

Parents: Try 3 Tips for Talking with Teens | Newsಗರ್ಲ್‌ಫ್ರೆಂಡ್ ಕೈ ಕೊಟ್ಲು ಎಂದು ಆತ್ಮಹತ್ಯೆಗೆ ಶರಣಾಗುವುದು, ಬಾಯ್‌ಫ್ರೆಂಡ್ ದೂರಾದ ಎಂದು ಆತನ ಮೇಲೆ ಹಲ್ಲೆಗೆ ಮುಂದಾಗುವುದು, ಪ್ರೀತಿಸಿದವರ ಮೇಲೆ ಅತಿಯಾದ ನಂಬಿಕೆ ಇಟ್ಟು ದೈಹಿಕ ಸಂಪರ್ಕ ಬೆಳೆಸುವುದು, ಈ ರೀತಿ ಸಾಕಷ್ಟು ವಿಷಯಗಳ ಬಗ್ಗೆ ಪೋಷಕರಿಗೆ ಅರಿವಿದೆ.

3,000+ Mom And Dad Talking To Teens Stock Photos, Pictures & Royalty-Free  Images - iStockಆದರೆ ಮಕ್ಕಳಿಗೆ ಇದನ್ನು ಮನವರಿಕೆ ಮಾಡಿಕೊಡಬೇಕು, ಅದಕ್ಕೂ ಮುನ್ನ ಅವರಿಗೆ ಗರ್ಲ್‌ಫ್ರೆಂಡ್ ಇದ್ದಾರಾ ಎನ್ನುವುದನ್ನು ಗಮನಿಸಿ..

19,900+ Parent Talking To Teen Stock Photos, Pictures & Royalty-Free Images  - iStock | Parent talking to teen about money, Asian parent talking to teen

  • ನಿಮ್ಮ ಮಗ ಮೊದಲಿಗಿಂತ ಈಗ ಸಾಕಷ್ಟು ಅನುಮಾನ ಬರುವ ರೀತಿ ನಡೆದುಕೊಳ್ಳುವುದು, ಅವರ ವಸ್ತುಗಳನ್ನು ಮುಟ್ಟಿದರೆ ಸಿಟ್ಟಾಗುವುದು, ರೂಂ ಬಾಗಿಲು ಹಾಕುವುದು, ಸದಾ ಫೋನ್‌ನಲ್ಲಿ ಇರುವುದು ಮಾಡ್ತಿದ್ದಾರಾ ಗಮನಿಸಿ..
  • ನಿಮ್ಮ ಮಗನ ಫೋನ್ ಪಾಸ್‌ವರ್ಡ್ ಬದಲಾಗುವುದು, ಎಲ್ಲರೂ ಇರುವಾಗ ಫೋನ್ ಬಂದರೆ ಗಾಬರಿಯಾಗುವುದು, ಫೋನ್ ಮುಟ್ಟಿದರೆ ಸಿಟ್ಟಾಗುವುದು ಮಾಡುತ್ತಾರೆ.
  • ಯಾವಾಗಲೂ ಮೂಡ್‌ನಲ್ಲಿ ಸಡನ್ ಬದಲಾವಣೆ, ಅತಿಯಾದ ಖುಷಿ ಅಥವಾ ಅತಿಯಾದ ಬೇಜಾರು, ಎಲ್ಲದಕ್ಕೂ ಇರಿಟೇಟ್ ಆಗುವುದು. ಸುಳ್ಳು ಹೇಳುವುದು, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದಿರುವುದು.
  • ಮಕ್ಕಳ ಆಟಪಾಠ, ಸುತ್ತಮುತ್ತಲ ವಾತಾವರಣದ ಬಗ್ಗೆ ಗಮನ ಇಡಿ, ಮಗನ ಸ್ನೇಹಿತರು, ಟೀಚರ‍್ಸ್ ಜೊತೆ ಸದಾ ಕಾಂಟಾಕ್ಟ್‌ನಲ್ಲಿರಿ.
  • ಯಾವುದೋ ಬಟ್ಟೆ ಹಾಕಿಕೊಂಡು ತಲೆಯನ್ನೂ ಬಾಚಿಕೊಳ್ಳದೆ ಹೋಗುವ ಮಗ ಇಂದು ಅತಿಯಾಗಿ ತಯಾರಾಗೋದು, ಹೊಸ ಪರ್ಫ್ಯೂಮ್ ಕೊಡಿಸಿ ಎನ್ನೋದು ಮಾಡ್ತಿದ್ದಾರಾ?
  • ನಿಮ್ಮ ಮಗನ ಜೊತೆ ನೀವೇ ಮಾತನಾಡಬಹುದು, ಗರ್ಲ್‌ಫ್ರೆಂಡ್, ಕ್ರಶ್ ಬಗ್ಗೆ ಕೇಳಿ. ಅವರ ಉತ್ತರ ಹೇಗಿದೆ ನೋಡಿ.. ಅವರ ದಾರಿಯಲ್ಲೇ ಹೋಗಿ ಕಡೆಗೆ ಉತ್ತರ ಸಿಗುತ್ತದೆ.

ಇದೆಲ್ಲವೂ ಅಂತೆಕಂತೆಗಳಷ್ಟೆ, ನಿಮ್ಮ ಮಗ ಹೀಗೆಲ್ಲಾ ಮಾಡುತ್ತಿರುವುದಕ್ಕೆ ಬೇರೆ ಕಾರಣಗಳು ಇರಬಹುದು. ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಿ, ಅನುಮಾನದಿಂದ ಕೂಗಾಡಬೇಡಿ, ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಿ. ನಿಮ್ಮ ಮಕ್ಕಳು ನಮಗಿಂತ ಚೆನ್ನಾಗಿ ನಿಮಗೇ ಗೊತ್ತಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!