ಸ್ಮೈಲ್ ಪ್ಲೀಸ್: ಭೂಮಿ,‌ ಚಂದ್ರನ‌ ಜೊತೆ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್ 1

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆ ಮಾಡಲಾಗಿರುವ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಸೆಲ್ಫಿ ತೆಗೆದುಕೊಂಡ ಫೋಟೋವೊಂದನ್ನು ಹಂಚಿಕೊಂಡಿದೆ ಎಂದು ಇಸ್ರೋ ತಿಳಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಇಸ್ರೊ, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಲ್ಯಾಗ್ರೇಂಜ್ ಪಾಯಿಂಟ್ 1 ಗೆ ಪ್ರಯಾಣಿಸುವ ಮೊದಲು ಗ್ರಹದ ಸುತ್ತಲೂ ಸುತ್ತುತ್ತಿರುವಾಗ ತನ್ನದೇ ಸೆಲ್ಫಿ ತೆಗೆದುಕೊಂಡಿದೆ. ಅದರಲ್ಲಿ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದೆʼ ಎಂದು ಹೇಳಿದೆ.

ಇದೀಗ ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಕಳೆದ ಶನಿವಾರ (ಸೆಪ್ಟೆಂಬರ್ 2, 2023) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ 57 ನಿಂದ ‘ಆದಿತ್ಯ-ಎಲ್ 1’ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ‘ಆದಿತ್ಯ-ಎಲ್1’ ಬಾಹ್ಯಾಕಾಶ ನೌಕೆಯು 16 ದಿನಗಳ ಕಾಲ ಭೂಮಿಯ ಸುತ್ತ ಸುತ್ತಲಿದೆ. ಅದರ ನಂತರ ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಗೊತ್ತುಪಡಿಸಿದ L1 ಪಾಯಿಂಟ್ (ಲ್ಯಾಗ್ರೇಂಜ್ ಪಾಯಿಂಟ್ 1) ಗುರಿಯನ್ನು 125 ದಿನಗಳ ಪ್ರಯಾಣದ ನಂತರ ತಲುಪಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!