ಭಗವಂತ ಮೆಚ್ಚುವಂತ ಕೆಲಸವನ್ನು ಮಾಡಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ: ಸಿಎಂ ಬೊಮ್ಮಾಯಿ

ಹೊಸ ದಿಗಂತ ವರದಿ,ಹಾವೇರಿ:

ಕ್ರಾತಿಕಾರಕ ಹೆಜ್ಜೆ ಇಟ್ಟಾಗ ಅನೇಕ ಸವಾಲುಗಳು ಬರುತ್ತವೆ. ಅಂತಹ ಸವಾಲುಗಳಿಗೆ ಬೆನ್ನು ತೋರಿಸಬಾರದು. ಆ ಸಮಯದಲ್ಲಿ ಎದೆಯನ್ನು ತೋರಿಸಿ ಎದುರಿಸಿ ಜಯಶಾಲಿ ಆಗಬೇಕು ಆವಾಗಲೇ ಆ ನಾಯಕನ ಮುತ್ಸದ್ದಿತನ ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಸವಣೂರ ತಾಲೂಕಿನ ಹುರಳಿಕುಪ್ಪಿ ಗ್ರಾಮದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವ ಕೆಲಸಕ್ಕೆ ಕೈಹಾಕಬೇಡಿ ಜೇನುಗೂಡಿಗೆ ಕೈಹಾಕಿದಂತೆ ಹೇಳಿದರು. ಭಗವಂತ ಮೆಚ್ಚುವಂತ ಕೆಲಸವನ್ನು ಮಾಡಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಖಂಡಿತ ಯಶಸ್ವಿಯಾಗುತ್ತದೆ ಎಂದರು.
ನನಗೆ ಅನೇಕ ಸವಾಲುಗಳು ಎದುರಾದಾಗ ಬೆನ್ನು ತೋರಿಸದೇ ಸವಾಲುಗಳನ್ನು ಎದುರಿಸಿದ್ದೇನೆ. ಪರಿಣಾಮಗಳನ್ನು ಕೊಟ್ಟಿದ್ದೇನೆ. ಜನರಿಗೆ ಒಳ್ಳೆಯದು ಆಗುತ್ತದೆ ಎಂದರೆ ಕಠಿಣ ನಿರ್ಣಯಗಳನ್ಮು ತಗೆದುಕೊಳ್ಳುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ. ಟೀಕೆ ಟಿಪ್ಪಣೆಗಳಿಗೆ ಹೆದರುವುದಿಲ್ಲ. ಟೀಕೆ ಟಿಪ್ಪಣೆಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಮುಂದೆ ಸಾಗುತ್ತೇನೆ ಎಂದು ಹೇಳಿದರು.
ಹಳ್ಳಿಗಾಡಿನಲ್ಲಿರುವ ಎಲ್ಲ ಕಸುಬುಗಳಲ್ಲಿ ದುಡಿಯುವ ಜನಾಂಗ ದುಡಿದಾಗ ಮಾತ್ರ ರಾಜ್ಯ, ದೇಶ ಪ್ರಗತಿ ಹೊಂದುವುದಕ್ಕೆ ಸಾಧ್ಯವಾಗುತ್ತದೆ. ದುಡಿಯುವ ವರ್ಗಕ್ಕೆ ನಮ್ಮ ಸರ್ಕಾರ ಎಲ್ಲ ಸಹಾಯ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ಇದ್ದ ಭೂಮಿಯನ್ನು ಪಡ ಬಿಡದೇ ಹತ್ತು ಹಲವು ಬೆಳೆಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಮಹಿಳೆಯರು ಗುಡಿ ಕೈಗಾರಿಕೆಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಮಹಿಳೆಯರಲ್ಲಿ ಆರ್ಥಿಕ ಉಳಿತಾಯದಲ್ಲಿ ತೊಡಗಿಕೊಳ್ಳುತ್ತಾರೆ ಹೀಗಾಗಿ ಮನೆಯ ಆರ್ಥಿಕ ಸ್ಥಿತಿಯೂ ಹೆಚ್ಚಾಗುತ್ತದೆ ಎಂದರು.
ಸ್ತ್ರೀಶಕ್ತಿ ಯೋಜನೆಯಿಂದ ಮಹಿಳೆಯರ ಆದಾಯ ಹೆಚ್ಚಾದಂತೆ ಈ ದೇಶದ ಆರ್ಥಿಕ ಸ್ಥಿತಿಯೂ ಹೆಚ್ಚಾಗುತ್ತದೆ. ಸ್ವಾಮಿ ವಿವೇಕಾನಂದ ಯೋಜನೆಯಿಂದೆ ಯುವ ಜನತೆಗೂ ಆದಾಯ ಹೆಚ್ಚಿಸುವ ಕೆಲಸವನ್ನು ಸರ್ಕಾರ ಮೂದಾಗಿದೆ ಎಂದು ತಿಳಿಸಿದರು.
ಈ ಖ್ಷೇತರದ ಜನತೆ ನೀಡಿದ ಶಕ್ತಿಯನ್ನು ನಾನು ಗುಲಗಂಜಿಯಷ್ಟು ನನ್ನ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವುದಿಲ್ಲ ಅದನ್ನು ಈ ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತೇನೆ. ಅಧಿಕ ಂಳೆಯಿಂದ ಬಿದ್ದು ಮನೆ ಕಳೆದುಕೊಂಡ ಎಲ್ಲರಿಗೂ ಸೂರನ್ನು ಕೊಡುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದರು.
ಯಾವ ಜನಾಂಗ ಭೂಮಿ ಜೊತೆ ಸದಾ ಸಂಬಂಧ ಇಟ್ಟುಕೊಂಡಿರುತ್ತದೆಯೋ ಆ ಜನ ಅತ್ಯಂತ ವಿಶ್ವಾಸದಾಯಕ ಜನಾಂಗವಾಗಿರುತ್ತದೆ. ರೈತರ ಬದುಕು ಅನಿಶ್ಚತೆಯ ಬದುಕಾಗಿದೆ. ಪ್ರಸಕ್ತ ವೈಜ್ಞಾನಿಕವಾಗಿ ಕೃಷಿಯನ್ನು ಮಾಡಿದಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ. ಈ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ರೈತರು ಮತ್ತು ಕಾರ್ಮಿಕರ ಮಾತ್ರ ಬಹಳದಾಗಿದೆ. ರವೀಂದ್ರನಾಥ ಟ್ಯಾಗೂರ ಅವರ ಹೇಳಿದಂತೆ ದೇವರು ಕಾರ್ಮಿಕನ ಮತ್ತು ರೈತರ ಶ್ರಮದಲ್ಲಿದೆ ಎಂದು ಹೇಳಿದರು.
ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಆದರೆ ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿದ್ದಾಗಿವೆ. ಈ ಆಧಾರದ ಮೇಲೆ ರೈತ ಆಧಾರಿತ ಕಾರ್ಯಕ್ರಮಗಳನ್ನು ಮಾಡಿದಾಗ ಮಾತ್ರ ನಾವು ಯಶಸ್ವಿಯಾಗುತ್ತೇವೆ ಎಂದರು.
ಜನವರಿ ತಿಂಗಳಲ್ಲಿ ರೈತರಿಗೆ ಡಿಸೇಲ್ ಸಬ್ಸಿಡಿ ನೀರುವ ರೈತ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು. ಈ ಉದ್ದೇಶಕ್ಕೆ ೫೦೦ ಕೋಟಿರೂ ಮೀಸಲಿಡಲಾಗಿದೆ. ರಾಜ್ಯದ ೬೭ ಲಕ್ಷ ರೈತರ ನೇರ ಖಾತೆಗೆ ಪ್ರೋತ್ಸಾಹ ಧನ ಜಮೆ ಮಾಡಲಾಗುವುದು ಎಂದರು.
ಹೊಸದಾಗಿ ಈ ವರ್ಷ ರಾಜ್ಯದ ೨೦ ಲಕ್ಷ ರೈತರಿಗೆ ೨೮ ಸಾವಿರ ಕೋಟಿರೂ ಸಾಲ ನೀಡಲಾಗುವುದು. ಅಮೃತ ಯೋಜನೆಯಡಿ ಕುರಿಗಾರರ ಬದುಕಿನಲ್ಲಿ ಪ್ರಗತಿ ತರಲು ೩೫೪ ಕೋಟಿರೂ ವೆಚ್ಚದಲ್ಲಿ ೨೦ ಸಾವಿರ ಕುರಿಗಾರರ ಸಂಘಗಳಿಗೆ ತಲಾ ೨೦ ಕುರಿ ಮತ್ತು ಒಂದು ಮೇಕೆ ನೀಡುವ ಯೋಜನೆಯನ್ನು ಜನವರಿಯಲ್ಲಿ ಜಾರಿಗೊಳಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!