ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಫೆ.15ರಂದು ನಡೆಯುವ ತಮ್ಮ ವಿವಾಹಕ್ಕೆ ಚಿತ್ರನಟ ಡಾಲಿ ಧನಂಜಯ ಭಾವಿ ಪತ್ನಿ ಧನ್ಯತಾ ಜೊತೆ ಆಗಮಿಸಿ ಸಿಎಂ ಸಿದ್ದರಾಮಯ್ಯನವರಿಗೆ ಮೊದಲ ಆಮಂತ್ರಣ ನೀಡಿದ್ದಾರೆ.
ಭಾವಿ ಪತ್ನಿ ಜೊತೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಾಲಿ ಸಿಎಂ ಸಿದ್ದರಾಮಯ್ಯನವರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಆ ಬಳಿಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೂ ಲಗ್ನಪತ್ರಿಕೆ ನೀಡಿದ್ದಾರೆ.
ಡಾಲಿ ಹಾಗೂ ಧನ್ಯತಾ ಆಮಂತ್ರಣ ಪತ್ರಿಕೆ ‘ಓಲ್ಡ್ ಇಸ್ ಗೋಲ್ಡ್’ ಥೀಮ್‌ನಲ್ಲಿದೆ. ಅಂಚೆ ಪತ್ರದಲ್ಲಿ ವಿಶೇಷವಾಗಿ ಲಗ್ನಪತ್ರಿಕೆ ಮೂಡಿಬಂದಿದೆ. ಫೆ.15ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಫೆ.16ರಂದು ಡಾಲಿ-ಧನ್ಯತಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಕಲ್ಯಾಣ ನಡೆಯಲಿದೆ.