‘ಕಾಂತಾರ’ ಅಬ್ಬರಕ್ಕೆ ಫಿದಾ ಅದ ‘ಹೆಡ್ ಬುಡ್’ ಡಾಲಿ ಧನಂಜಯ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಕಾಂತಾರ’ ಸಿನಿಮಾ ನೋಡಿ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಬಾಲಿವುಡ್‌ ನಟಿ ಕಂಗನಾ ರಣಾವತ್, ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನಿಮಾ ನೋಡಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ಇದೀಗ ‘ಹೆಡ್ ಬುಡ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರೋ ಡಾಲಿ ಧನಂಜಯ್ ಕೂಡ ‘ಕಾಂತಾರ’ ಸಿನಿಮಾ ವೀಕ್ಷಿಸಿದ್ದಾರೆ. ರಿಷಬ್ ಶೆಟ್ಟಿ ಬಗ್ಗೆನೂ ಮೆಚ್ಚುಗೆ ಸೂಚಿಸಿದ್ದಾರೆ.

‘ಕಾಂತಾರ’ ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲೆಲ್ಲಾ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಬಾಕ್ಸಾಫೀಸ್‌ನಲ್ಲೂ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಮುನ್ನುಗ್ಗುತ್ತಿದೆ. ಈ ಮಧ್ಯೆ ಡಾಲಿ ಧನಂಜಯ್ ‘ಕಾಂತಾರ’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಜೊತೆಗೆ ಸಿನಿಮಾವನ್ನು ತಡವಾಗಿ ವೀಕ್ಷಿಸಲು ಕಾರಣವೇನು? ಅನ್ನೋದನ್ನೂ ತಿಳಿಸಿದ್ದಾರೆ.

“ಕಾಂತಾರ ನನ್ನ ಹೆಡ್ ಬುಷ್ ಸಿನಿಮಾದ ನಡುವೆ ನೋಡುವುದು ತಡವಾಯಿತು. ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗೂ ನಿರ್ದೇಶಕನ ಅಭಿಮಾನಿಯಾದೆ. ಇದು ಎಂತಹ ಅದ್ಭುತ ಅನುಭವ. ಗೆಳತಿ ಸಪ್ತಮಿಯ ಮುಗ್ಧತೆ ಇಷ್ಟವಾಯಿತು. ‘ಕಾಂತಾರ’ ಖಂಡಿತವಾಗಿಯೂ ನಮ್ಮ ಹೆಮ್ಮೆ. ಕನ್ನಡ ಚಿತ್ರರಂಗದ ಹೆಮ್ಮೆ ಎಂದು ಡಾಲಿ ಧನಂಜಯ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕೆಜಿಎಫ್’ ಹಾಗೂ ‘ಕಾಂತಾರ’ದಂತಹ ಅದ್ಭುತ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಿನಿಮಾವನ್ನೂ ಹಾಡಿ ಹೊಗಳಿಸಿದ್ದಾರೆ. ಇಂತಹ ಕಥೆಗಳನ್ನು ಒಪ್ಪಿ, ಅಪ್ಪಿ ಜಗತ್ತಿಗೆ ತಲುಪಿಸುವಂತಹ ನಮ್ಮ ಹೊಂಬಾಳೆ ಫಿಲ್ಮ್ಸ್‌ಗೆ ನನ್ನ ಪ್ರೀತಿಯ ಅಪ್ಪುಗೆ ಎಂದು ಡಾಲಿ ಧನಂಜಯ್ ಪ್ರತ್ಯೇಕವಾಗಿ ಟ್ವೀಟ್ ಮಾಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!