ನಟ ಶಿವಣ್ಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಡಾಲಿ ಧನಂಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಜ.26ರಂದು ಬೆಂಗಳೂರಿಗೆ ಮರಳಿದ್ದಾರೆ. ಈ ಹಿನ್ನೆಲೆ ಶಿವಣ್ಣ ಮನೆಗೆ ಡಾಲಿ ಧನಂಜಯ ಅವರು ಭೇಟಿ ನೀಡಿದ್ದಾರೆ.

ಶಿವಣ್ಣ ಅವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಕೊಂಡಿದ್ದು, ಮನೆಗೆ ಮರಳಿರುವ ನಟನನ್ನು ನೋಡಲು ಡಾಲಿ ತೆರಳಿದ್ದಾರೆ. ಶಿವಣ್ಣರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಕೆಲ ಕಾಲ ಅವರೊಂದಿಗೆ ಸಮಯ ಕಳೆದಿದ್ದಾರೆ.

ಇನ್ನೂ ಡಾಲಿ ಅವರು ಇದೇ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಚಿತ್ರರಂಗದ ಕಲಾವಿದರಿಗೆ ಮತ್ತು ರಾಜಕೀಯ ರಂಗದ ಗಣ್ಯರಿಗೆ ಮದುವೆಗೆ ಆಹ್ವಾನ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!