CINE | ಹಳದಿ ಶಾಸ್ತ್ರ ಸಂಭ್ರಮದಲ್ಲಿ ಮಿಂದೆದ್ದ ಡಾಲಿ-ಧನ್ಯತಾ ಜೋಡಿ, ಸೆಲೆಬ್ರಿಟಿಗಳ ಸಾಥ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟ ಡಾಲಿ ಧನಂಜಯ್‌ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಧನಂಜಯ್‌ ಮತ್ತು ಡಾಕ್ಟರ್‌ ಧನ್ಯತಾ ಜೋಡಿ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

ನಟನ ಹಳದಿ ಶಾಸ್ತ್ರ ಸಮಾರಂಭಕ್ಕೆ ಹಿರಿಯ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮತ್ತು ಕುಟುಂಬದವರು ಆಗಮಿಸಿ ಶುಭಕೋರಿದ್ದಾರೆ.ಜರ್ಮನಿಯ ರಂಗ ನಿರ್ದೇಶಕ ಕ್ರಿಸ್ಟೆನ್‌ ಭಾಗವಹಿಸಿದ್ದು ಕೂಡ ವಿಶೇಷವಾಗಿತ್ತು. ಹಳದಿ ಶಾಸ್ತ್ರ ಸಮಾರಂಭದಲ್ಲಿ ಧನಂಜಯ್‌ ಮತ್ತು ಧನ್ಯತಾ ಜೋಡಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಪಾಲ್ಗೊಂಡು ಶುಭಹಾರೈಸಿದ್ದಾರೆ.

ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಮತ್ತು ಡಾಕ್ಟರ್‌ ಜೋಡಿ ಆರತಕ್ಷತೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೇ ಶಾಸ್ತ್ರಗಳು ನಡೆಯಲಿವೆ. ಸಂಜೆ 6 ಗಂಟೆಯ ನಂತರ ಆರತಕ್ಷತೆ ಕಾರ್ಯಕ್ರಮ ಇರಲಿದೆ. ನಾಳೆ ಮದುವೆಯ ಮಹೂರ್ತ ಇದ್ದು, ಸಿನಿರಂಗದ ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!