ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಬೆಳಂಬಾರದ ಮದ್ಯ ಖಾರ್ವಿವಾಡ ಕಡಲ ತೀರದಲ್ಲಿ ಡಾಲ್ಪಿನ್ ಕಳೇಬರ ಪತ್ತೆಯಾಗಿದ್ದು ತೀವ್ರವಾಗಿ ಕೊಳೆತು ಹೋಗಿದ್ದ ಕಳೆಬರವನ್ನು ಅರಣ್ಯ ಇಲಾಖೆಯ ಸಾಗರ ಜೀವಿ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಹೂತು ಹಾಕಿದ್ದಾರೆ.
ಫೆಸಿಫಿಕ್ ಹಂಪ್ ಬ್ಯಾಕ್ ಪ್ರಭೇದದ ಡಾಲ್ಪಿನ್ ಕಳೇಬರ ಕೊಳೆತ ಸ್ಥಿತಿಯಲ್ಲಿ ದೊರಕಿದ್ದು ಕಳೆದ ವರ್ಷ ಜಿಲ್ಲೆಯ ಕೆಲವು ಕಡಲ ತೀರಗಳಲ್ಲಿ ಇದೇ ರೀತಿಯ ಡಾಲ್ಪಿನ್ ಗಳು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಅಳಿವಿನ ಅಂಚಿನಲ್ಲಿ ಇರುವ ಅಪರೂಪದ ಡಾಲ್ಪಿನ್ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಕೋಸ್ಟಲ್ ಮರೈನ್ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಡಾಲ್ಪಿನ್ ಮಣ್ಣು ಮಾಡಲು ಕ್ರಮಗಳನ್ನು ಕೈಗೊಂಡರು.