Saturday, March 25, 2023

Latest Posts

ಮಾರ್ಚ್‌ ಮೊದಲ ದಿನವೇ ಕಹಿ ಸುದ್ದಿ: ಗೃಹಬಳಕೆ, ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾರ್ಚ್‌ ತಿಂಗಳ ಮೊದಲ ದಿನದಂದೇ ಎಲ್‌ಪಿಜಿ ಸಿಲಿಂಡರ್‌ ಗ್ರಾಹಕರಿಗೆ ಕಹಿ ಸುದ್ದಿ ಸಿಕ್ಕಿದೆ. ಭಾರೀ ದರ ಏರಿಕೆಯಾಗುವ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಪ್ರಸ್ತುತ ಮಾರುಕಟ್ಟೆಯ ಸನ್ನಿವೇಶದಲ್ಲಿ ಏರುತ್ತಿರುವ ಇಂಧನ ಬೆಲೆಗಳ ಭಾರ ಭರಿಸಬೇಕಾಗಿರುವುದರಿಂದ ಎಲ್ಪಿಜಿ ಬೆಲೆಗಳ ಹೆಚ್ಚಳವು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತಿದೆ.

ಭಾರತದಲ್ಲಿ LPG ಬೆಲೆಯನ್ನು ರಾಜ್ಯ-ಚಾಲಿತ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಭಾರತದಲ್ಲಿ ಬಹುತೇಕ ಎಲ್ಲಾ ಮನೆಗಳು LPG ಸಂಪರ್ಕವನ್ನು ಹೊಂದಿವೆ.

ದೇಶೀಯ ಎಲ್‌ಪಿಜಿ ಸಿಲಿಂಡರ್‌ನ 14.2 ಕೆಜಿ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ 1103/ ಕ್ಕೆ ಏರಿಕೆಯಾಗಿದೆ. ಹಾಗೆಯೇ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 350.50 ರೂ. ಏರಿಕೆಯಾಗಿದೆ ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 2119.50 ರೂಗೆ ಏರಿಕೆಯಾಗಿದೆ. ಈ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.

ಪರಿಷ್ಕೃತ ದರದ ಮಾಹಿತಿ ಇಲ್ಲಿದೆ

ಗೃಹಬಳಕೆ ಸಿಲಿಂಡರ್‌ ಬೆಲೆ ಹೆಚ್ಚಳದ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೀಗಿದೆ.

ನವದೆಹಲಿ- ರೂ 1,103.00, ಕೋಲ್ಕತ್ತಾ- ರೂ 1,079.00, ಮುಂಬೈ- ರೂ 1,052.50, ಚೆನ್ನೈ- ರೂ 1,068.50, ಗುರ್ಗಾಂವ್- ರೂ 1,061.50, ನೋಯ್ಡಾ- ರೂ 1,050.50, ಬೆಂಗಳೂರು ರೂ 1,055.00 ಹೈದರಾಬಾದ್-1,105.00ರೂ ಜೈಪುರ ರೂ 1,056.50, ಲಕ್ನೋ- ರೂ 1,090.50, ಪಾಟ್ನಾ- ರೂ 1,201.00, ತಿರುವನಂತಪುರಂ- ರೂ 1,062.00ರೂಪಾಯಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!