ಡೊನಾಲ್ಡ್ ಟ್ರಂಪ್ ನಿಧನ: ಅಮೆರಿಕ ಮಾಜಿ ಅಧ್ಯಕ್ಷನ ಮಗನ ‘X’ ಖಾತೆಯಿಂದ ಪೋಸ್ಟ್ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದರೆಂದು ಅವರ ಮಗನ ‘ಎಕ್ಸ್’ ಖಾತೆಯನ್ನು ಹ್ಯಾಕ್ ಮಾಡಿ ದುಷ್ಕರ್ಮಿಗಳು ಟ್ವೀಟ್ ಮಾಡಿದ್ದಾರೆ.

ಜ್ಯೂ.ಟ್ರಂಪ್ ಅವರ ‘ಎಕ್ಸ್’ ಖಾತೆಯ ಒಂದು ಪೋಸ್ಟ್‌ನಲ್ಲಿ ತನ್ನ ತಂದೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

‘ನನ್ನ ತಂದೆ ಡೊನಾಲ್ಡ್ ಟ್ರಂಪ್ ಮೃತಪಟ್ಟಿದ್ದಾರೆ ಎಂಬ ವಿಷಯವನ್ನು ತಿಳಿಸಲು ಅತ್ಯಂತ ದುಃಖವಾಗುತ್ತಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ’ ಎಂದು ಪೋಸ್ಟ್ ಮಾಡಲಾಗಿದೆ.

ಇದರ ಜೊತೆಗೆ, ಹಲವು ಅಸಂಬದ್ಧ ಮತ್ತು ಅಸಭ್ಯ ಟ್ವೀಟ್‌ಗಳನ್ನು ಸಹ ಮಾಡಲಾಗಿತ್ತು. ಖಾತೆ ಹ್ಯಾಕ್ ಆಗಿದೆ ಎಂಬುವುದು ಗಮನಕ್ಕೆ ಬಂದ ನಂತರ ಟ್ವೀಟ್‌ಗಳನ್ನು ಡಿಲೀಟ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!