May 1, 2026
Friday, May 1, 2026
spot_img

ದಿನಭವಿಷ್ಯ: ಇಂದು ಹಿರಿಯರ ಮಾತಿಗೆ ಎದುರು ಮಾತು ಆಡಬೇಡಿ! ಹೊಸತನ ಆರಂಭ

ಮೇಷ
ನಿರಾಶೆ ಬಿಡಿ, ಇಂದು ನಿಮಗೆ ಒಳ್ಳೆಯದಾಗುವ ಕಾಲ. ಗುರಿ ಸಾಧನೆ. ಚಿಂತೆ ಪರಿಹಾರ. ಉದ್ಯೋಗದ ಆತಂಕ ನಿವಾರಣೆ. ಕೌಟುಂಬಿಕ ಸಮರಸತೆ.  
ವೃಷಭ
ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ನಿಮ್ಮ ಕ್ಷಮತೆ ಮೆಚ್ಚುಗೆಗೆ ಪಾತ್ರವಾಗಲಿದೆ. ಆಸ್ತಿ ಯಾ  ವಾಹನ ಖರೀದಿಗೆ ಕಾಲ ಕೂಡಿಬರಲಿದೆ. ಮಿಥುನ
ವೃತ್ತಿಗೆ ಸಂಬಂಽಸಿ ಶುಭ ಬೆಳವಣಿಗೆ. ದಂಪತಿಗಳ ವಿರಸ ಶಮನಕ್ಕೆ ನಿಧಾನಗತಿ ಹಿಡಿದೀತು. ಈ ಹಂತದಲ್ಲಿ ಮೌನ ಸಾಽಸಿ.      
ಕಟಕ
ಚಿಂತೆ ತಂದ ವಿಷಯವೊಂದು ಇಂದು ಇತ್ಯರ್ಥ ಕಾಣಲಿದೆ. ಹಿರಿಯರ ಮಾತಿಗೆ ಪ್ರತಿಯಾಡದಿರಿ. ಹಣದ ಕೊರತೆ ನೀಗುವುದು.      
ಸಿಂಹ
ಹೊಸತನಕ್ಕೆ ತುಡಿಯುವಿರಿ. ಜೀವನಶೈಲಿ ಬದಲಿಸಲು ಮನಸ್ಸು ಮಾಡಿ. ಪ್ರಗತಿಗೆ ಅಡ್ಡಿ ತರುವ ಸಂಗತಿ ತ್ಯಜಿಸಿರಿ. ಧನವ್ಯಯ.    
ಕನ್ಯಾ
ಅನಪೇಕ್ಷಿತ ಬೆಳವಣಿಗೆ. ಆಪ್ತರ ಜತೆ ವಿಶ್ವಾಸದಲ್ಲಿ ಕೊರತೆ. ನಿಮ್ಮ ಸಾಧನೆಗೆ ತೃಪ್ತಿ ಪಡಿ. ಸಾಧ್ಯವಾಗದ್ದಕ್ಕೆ ಕೊರಗುತ್ತಾ ಕೂರದಿರಿ.     ತುಲಾ
ನಿಮ್ಮ ಸಾಧನೆಗೆ  ಮೆಚ್ಚುಗೆ ಪಡೆಯುವಿರಿ. ಆತ್ಮೀಯರ ಸ್ನೇಹದಲ್ಲಿ ಹುಳಿ ಹಿಂಡಲು ಕೆಲವರ ಯತ್ನ. ಅದಕ್ಕೆ ಆಸ್ಪದ ಕೊಡಬೇಡಿ.
ವೃಶ್ಚಿಕ
ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ನಿಮಗಿಂದು ಒಳಿತಾಗಲಿದೆ. ಮನಸ್ಸಿಗೆ ಉಲ್ಲಾಸ. ಆತ್ಮೀಯರ ಜತೆ ಕಾಲಕ್ಷೇಪ. ಕೌಟುಂಬಿಕ ಸಮಾರಂಭದಲ್ಲಿ ಭಾಗಿ.        
ಧನು
ಮನಸ್ಸಿನ ಶಾಂತಿ ಕಾಯ್ದುಕೊಳ್ಳಿ. ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಬೇಡಿ. ಎಲ್ಲರ ಜತೆ ಹೊಂದಾಣಿಕೆಯಿರಲಿ. ಮಕ್ಕಳ ಸಾಧನೆ ತೃಪ್ತಿಕರ.   ಮಕರ
ಇತರರ ಜತೆ ಮಾತನಾಡುವಾಗ ಎಚ್ಚರ ವಹಿಸಿ. ಹದತಪ್ಪಿದ ಮಾತು ದೊಡ್ಡ ಜಗಳಕ್ಕೆ ಕಾರಣವಾದೀತು. ಆರ್ಥಿಕ ಉನ್ನತಿ ಸಾಽಸುವಿರಿ.   ಕುಂಭ
ನಿಮ್ಮ ಕೌಶಲದ ಕೆಲಸಕ್ಕೆ ಮೆಚ್ಚುಗೆ. ವೃತ್ತಿಯಲ್ಲಿ ತೋರುವ ಪೈಪೋಟಿಯಲ್ಲಿ ಗೆಲ್ಲುವಿರಿ. ದಂಪತಿ ಮಧ್ಯೆ ಅನವಶ್ಯ ಜಗಳವಾದೀತು.        
ಮೀನ
ವೃತ್ತಿಯಲ್ಲಿ ಹೊಸ ಯೋಜನೆ ಅಳವಡಿಸಲು ಸಕಾಲ. ಒತ್ತಡವು ನಿಮ್ಮ ಏಕಾಗ್ರತೆಗೆ ಭಂಗ ತಂದೀತು. ಏಕಾಂಗಿಗಳಿಗೆ ವಿವಾಹ ಬಂಧ ಸಂಭವ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !