STORY | ಮರುಭೂಮಿಯ ಗುಲಾಬಿ ಹೂವಿನ ಥರ ಬೀಗಬೇಡಿ!

ಮರುಭೂಮಿ, ಬಿರು ಬಿಸಿಲು, ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಒಂದು ಗುಲಾಬಿ ಹೂವು ಸುಂದರವಾಗಿ ಎದ್ದು ನಿಂತಿತ್ತು. ತನ್ನ ಗಿಡದಲ್ಲಿ ಅರಳಿದ ಏಕೈಕ ಸುಂದರಿಯನ್ನು ಹಿಡಿಯಲು ಸಾಧ್ಯವೇ ಇರಲಿಲ್ಲ.

ತನ್ನ ಕೆಂಪು ಬಣ್ಣ, ಮೃದುವಾದ ಎಸಳು, ಸುಮಧುರ ಸುವಾಸನೆ ಅಬ್ಬಾ ಗುಲಾಬಿಯನ್ನು ಕಿತ್ತು ಈಗ್ಲೇ ಮುಡಿದುಕೊಂಡುಬಿಡೋಣ ಎನಿಸುವಂತಿತ್ತು.

Rosemantic Red® rose - Palatine Fruit & Rosesಕಾಲಕ್ರಮೇಣ ಗುಲಾಬಿಗೆ ಧಿಮಾಕು ಬಂದಿತ್ತು, ಜೀವನದಲ್ಲಿ ಅದಕ್ಕಿದ್ದಿದ್ದು ಒಂದೇ ಸಮಸ್ಯೆ, ಅದೇನೆಂದರೆ ಕಳ್ಳಿ ಪಕ್ಕ ಬೆಳಿತಿದ್ದೀನಿ ಅನ್ನೋದು.

The Secrets of The Cacti | PBSಪ್ರತೀ ದಿನ ನೇಬರ್ ಕಳ್ಳಿ ಗಿಡದ ರೂಪ ನೋಡಿ ಆಡ್ಕೊಳ್ಳೋದು, ಸೌಂದರ್ಯ ಇಲ್ದೆ ಬದುಕಿದ್ರೂ ವೇಸ್ಟ್ ಅನ್ನೋದು ಹೀಗೆ ಕಳ್ಳಿ ಗಿಡ ಈಗ್ಲೇ ಹೋಗಿ ಸೂಸೈಡ್ ಮಾಡ್ಕೊಬೇಕು. ಅಷ್ಟು ಚುಚ್ಚಿ ಮಾತನಾಡ್ತಿತ್ತು.

ಆದ್ರೆ ಕಳ್ಳಿ ಗಿಡ ಗುಲಾಬಿ ಚುಚ್ ಮಾತಿಗೆ ಕ್ಯಾರೆ ಅಂತಿರ್ಲಿಲ್ಲ. ತಂದಾಯ್ತು, ತನ್ ಲೈಫ್ ಆಯ್ತು ಅನ್ಕೊಂಡ್ ಇತ್ತು. ಹೀಗೇ ಒಂದಿನ ಮರುಭೂಮಿಲಿ ಬಿಸಿಲು ಜೊತೆಗೆ ಬಿರುಗಾಳಿ ಬೇರೆ ಬೀಸೋಕ್ ಶುರುವಾಗಿ ಮಣ್ಣು ಎಲ್ಲಾ ಕಡೆ ಇತ್ತು.

Dancing Cactus Coachella GIF - Dancing Cactus Coachella Desert - Discover &  Share GIFsಗುಲಾಬಿ ಊಟ ತಯಾರಿಸಿಕೊಳ್ಳೋಕೆ ನೀರು ಸಿಗ್ಲಿಲ್ಲ. ಎಷ್ಟೇ ಪ್ರಯತ್ನ ಪಟ್ರೂ ಜೀವಂತ ಇರೋಕ್ ಕಷ್ಟ ಆಗ್ತಿತ್ತು. ಕೆಂಪು ದಳಗಳೆಲ್ಲ ಕಪ್ಪಾಗಿ ಬಾಡಿ ಹೋಯ್ತು, ಗುಲಾಬಿ ಸಾಯೋ ಸ್ಥಿತಿಗ್ ಬಂತು.

Aesthetic Vibes On X: Dead Roses, Black Bear Vibes, 57% OFFಕಳ್ಳಿ ಹತ್ರ ಬಂದು, ಸ್ವಲ್ಪ ನೀರ್ ಕೊಡ್ತೀಯಾ ಅಂತ ಕೇಳ್ತು. ಕಳ್ಳಿ ಗಿಡ ಏನೂ ಕಮೆಂಟ್ ಮಾಡ್ದೆ ತನ್ ಹತ್ರ ಇದ್ದಿದ್ ನೀರನ್ನ ಶೇರ್ ಮಾಡ್ತು. ಗುಲಾಬಿ ಮತ್ತೆ ಹೊಸ ಜೀವನ ಆರಂಭಿಸ್ತು.

Blooming Rose gif #5 by: Hal Grey Hawk Brower on Make A Gif | Rosé gif, Blooming  rose, Roseಏನರ್ಥ ಆಯ್ತು ಈ ಕತೆಯಿಂದ, ನೀವು ಸುಂದರವಾದ ಗುಲಾಬಿಯೇ ಅಥವಾ ಗಟ್ಟಿಜೀವವರಿರುವ ಕಳ್ಳಿ ಗಿಡವೇ? ಅಂದಚಂದ ಸ್ವಲ್ಪ ದಿನ ಆದರೆ ಗುಣ ಸಾಯುವವರೆಗೂ, ಕಪ್ಪಗಿದ್ದೀಯ, ದಪ್ಪ ಇದ್ದೀಯಾ, ಸಣ್ಣ ಇದೀಯ, ದುಡ್ಡಿಲ್ಲ ಹೀಗೆ ಸಾವಿರಾರು ಕೆಟ್ಟದ್ದನ್ನು ಬೇರೆಯವರ ಬಗ್ಗೆ ಮಾತಾಡ್ಬೋದು. ಆದರೆ ಅದರಿಂದ ಪ್ರಯೋಜನ ಏನು? ಎಲ್ಲರೂ ಕಳ್ಳಿ ಗಿಡದ ಹಾಗೇ ಒಳ್ಳೆ ಬುದ್ಧಿಯನ್ನೇ ಇಟ್ಟುಕೊಳ್ಲೋದಿಲ್ಲ. ಗುಲಾಬಿಗೆ ನೀರು ಬೇಕಾದಾಗ ಕಳ್ಳಿ ಕೊಡೋದಿಲ್ಲ ಅಂದಿದ್ರೆ ಗುಲಾಬಿ ಕತೆ ಮುಗಿದೇ ಹೋಗೋದು ಅಲ್ವಾ?!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!