ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ಕಲಾವಿದರ ಸಂಘದಿಂದ ಇಂದು ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ ನಡೆಡಿದೆ.
ಈ ವೇಳೆ ನಾಗದರ್ಶನ ಸಮಯ ಹಿರಿಯ ನಟ ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ನಾಗದೇವರು ದೊಡ್ಡಣ್ಣ, ಜಗ್ಗೇಶ್, ವೆಂಕಟೇಶ್ ಮುಂದೆ ತಪ್ಪುಗಳ ಪಟ್ಟಿಕೊಟ್ಟಿದ್ದಾರೆ.
ನಿಮ್ಮಲ್ಲಿ ಒಗ್ಗಟ್ಟು ಉಂಟಾ? ಇಷ್ಟು ಮಾಡಿದ್ರೂ ಎಲ್ಲರೂ ಒಟ್ಟಾಗಿ ಸೇರಿಲ್ಲ. ನನ್ನನ್ನು ಭಯ ಪಟ್ಟು ಪೂಜಿಸಬೇಡಿ. ಪ್ರೀತಿಯಿಂದ ಗೆಲ್ಲಿ. ಈ ಜಾಗದ ಪಾವಿತ್ರ್ಯತೆ ಹಾಳು ಮಾಡ್ಬೇಡಿ. ಈ ಕಲಾವಿದರ ಸಂಘದಲ್ಲಿ ನೀವು ಏನು ಮಾಡ್ತಿದ್ದೀರಿ. ಇದು ಶಾರದೆಯ ಸ್ಥಳ. ಆಡಂಬರ ನನಗೆ ಬೇಡ. ಈ ಸ್ಥಳದಲ್ಲಿ ಧರ್ಮದ ಕಾರ್ಯಗಳು ನಡೀತಿದ್ವು. ದೇವರ ಕಾರ್ಯ ಅಲ್ಲ. ಇಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದೀರಿ ಅದು ಸರಿಯಲ್ಲ. ಇದೆಲ್ಲವನ್ನೂ ಸರಿಪಡಿಸಿಕೊಳ್ಳಿ. ದೊಡ್ಡ ಮಟ್ಟದ ಕೆಲಸಗಳು ಆಗ್ಬೇಕು ಇಲ್ಲಿ. ಹಿಂದೆ ನಡೆದಿರುವಂತೆ ಎಲ್ಲಾ ಹಿರಿಯರು ಇಲ್ಲಿ ಸೇರುವಂತೆ ಆಗ್ಬೇಕು. ಎಲ್ಲರೂ ಒಗ್ಗಟ್ಟಾಗಿ ನಿಲ್ಲಿ. ದಿನ ಇಲ್ಲಿ ದೀಪ ಬೆಳಗಿಸಿ. ಶತ್ರು ನಾಶ, ಅಪಕೀರ್ತಿ ಎಲ್ಲವೂ ದೂರಾಗುತ್ತೆ. ನನ್ನ ಕೋಪಕ್ಕೆ ಬಲಿ ಆಗಬೇಡಿ. ನಾನು ಹೇಳಿದಂತೆ ಮಾಡಿ. ಇಲ್ಲವಾದರೇ ನನ್ನ ಕೋಪಕ್ಕೆ ಗುರಿ ಆಗ್ತೀರಾ ಎಂದು ಎಚ್ಚರಿಕೆ ನೀಡಿದೆ.