ICC ODI Ranking: ಎರಡನೇ ಸ್ಥಾನಕ್ಕೆ ರೋಹಿತ್​ ಶರ್ಮ, ಮೂರಕ್ಕೆ ಇಳಿದ ಗಿಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಅವರು 2ನೇ ಸ್ಥಾನಕ್ಕೇರಿದ್ದಾರೆ. ಅಗ್ರ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್​ ಅಜಂ ಅವರಿಗಿಂತ ಕೇವಲ 59 ಅಂಕಗಳ ಹಿನ್ನಡೆಯಲ್ಲಿದ್ದಾರೆ.

ಈ ಹಿಂದೆ 2ನೇ ಸ್ಥಾನದಲ್ಲಿದ್ದ ಯುವ ಬ್ಯಾಟರ್​ ಶುಭಮನ್​ ಗಿಲ್​(763 ರೇಟಿಂಗ್​ ಅಂಕ) ಒಂದು ಸ್ಥಾನಗಳ ಕುಸಿತ ಕಂಡು ಮೂರಕ್ಕೆ ಇಳಿದಿದ್ದಾರೆ. ವಿರಾಟ್​ ಕೊಹ್ಲಿ(746 ರೇಟಿಂಗ್​ ಅಂಕ) ನಾಲ್ಕನೇ ಸ್ಥಾನಿಯಾಗಿದ್ದಾರೆ. ಒಟ್ಟಾರೆ ಮೂರು ಭಾರತೀಯ ಬ್ಯಾಟರ್​ಗಳು ಟಾಪ್​ 10ನಲ್ಲಿ ಕಾಣಿಸಿಕೊಂಡಿದ್ದಾರೆ. ಲಂಕಾ ಸರಣಿಯ 2 ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶಿಸಿದ ಕೆ.ಎಲ್​ ರಾಹುಲ್ (644 ರೇಟಿಂಗ್​ ಅಂಕ)​ ಒಂದು ಸ್ಥಾನ ಕುಸಿದು 22ನೇ ಸ್ಥಾನ ಪಡೆದಿದ್ದಾರೆ.

ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್ದೀಪ್ ಯಾದವ್ ಬೌಲಿಂಗ್​ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಭಾರತದ ಅಗ್ರ ಶ್ರೇಯಾಂಕದ ಏಕದಿನ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಲಂಕಾ ವಿರುದ್ಧ ಏಕದಿನ ಆಡದ ಜಸ್​ಪ್ರೀತ್​ ಬುಮ್ರಾ 645 ರೇಟಿಂಗ್​ ಅಂಕದೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್, ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್​ವುಡ್​ ಮತ್ತು ಆ್ಯಡಂ ಝಂಪಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಆಲ್​ರೌಂಡರ್​ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 16ನೇ ಸ್ಥಾನಿಯಾಗಿದ್ದಾರೆ. ಅಫಘಾನಿಸ್ತಾನದ ಹಿರಿಯ ಆಟಗಾರ ಮೊಹಮ್ಮದ್​ ನಬಿ ಅಗ್ರಸ್ಥಾನ ಪಡೆದಿದ್ದಾರೆ. ಹಾರ್ದಿಕ್​ ಪಾಂಡ್ಯ 4 ಸ್ಥಾನಗಳ ಕುಸಿತದೊಂದಿಗೆ 27ನೇ ಸ್ಥಾನ ಪಡೆದಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!