ಕಾಂಗ್ರೆಸ್ ಸರ್ಕಾರ ಇದೆ ಎಂಬ ಅಹಂಕಾರ ಬೇಡ: ಬಿ.ವೈ.ರಾಘವೇಂದ್ರ ಎಚ್ಚರಿಕೆ

ಹೊಸದಿಗಂತ, ಶಿವಮೊಗ್ಗ:

 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ಥಿತ್ವದಲ್ಲಿದೆ ಎಂತಹ ಅಪರಾಧ ಕೃತ್ಯವನ್ನು ಜೀರ್ಣಿಸಿಕೊಳ್ಳಬಹುದು ಎಂಬ ಅಹಂಕಾರದಲ್ಲಿ ಕೆಲ ಮುಸ್ಲಿಂರಿಂದ ಹಿಂದೂಗಳ ವಿರುದ್ದ ಹಲ್ಲೆ, ಕೊಲೆ ಯತ್ನದ ಪ್ರಕರಣ ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ಪೊಲೀಸ್‌ ಇಲಾಖೆ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಪ್ರತಿಭಟನೆ ಸ್ಪರೂಪ ಬದಲಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಎಚ್ಚರಿಸಿದರು.

ಮಂಗಳವಾರ ರಾತ್ರಿ ಶಿಕಾರಿಪುರ ಪಟ್ಟಣದ ದೊಡ್ಡಪೇಟೆಯಲ್ಲಿ ವ್ಹೀಲಿಂಗ್‌ ನಲ್ಲಿ ತೊಡಗಿದ್ದ ಮುಸ್ಲಿಂ ಯುವಕರಿಗೆ ವ್ಹೀಲಿಂಗ್‌ ನಿಂದ ಮಕ್ಕಳು ಮಹಿಳೆಯರು ಮನೆಯಿಂದ ಹೊರಬರಲು ಹೆದರುತ್ತಿದ್ದು ಹೊರವಲಯದಲ್ಲಿ ವ್ಹೀಲಿಂಗ್‌ ಮಾಡುವಂತೆ ತಿಳಿಹೇಳಿದ ಸುಶೀಲ್‌ ಎಂಬ ಯುವಕನಿಗೆ ಚೂರಿಯಿಂದ ಹತ್ಯೆಗೆ ಯತ್ನಿಸಿದ ಘಟನೆ ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬುಧವಾರ ಶಿಕಾರಿಪುರ ಪಟ್ಟಣ ಪೊಲೀಸ್‌ ಠಾಣೆ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಸುಶೀಲ್‌ ಹಲ್ಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದ ಇಬ್ಬರು ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮದ ಮೂಲಕ ಜೈಲಿನಲ್ಲಿ ಕೊಳೆಯುವ ರೀತಿ ಐಪಿಸಿ ಸೆಕ್ಷನ್‌ ದೂರು ದಾಖಲಿಸುವಂತೆ  ಆಗ್ರಹಿಸಿದ ಅವರು, ಬಾಲಾಪರಾಧಿ ಎಂಬ ಕಥೆ ಕಟ್ಟಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದಲ್ಲಿ ಹಿಂದೂ ಸಮಾಜ ಎದ್ದು ನಿಲ್ಲಲಿದೆ ಎಂದು ಎಚ್ಚರಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ತಾ.ಉಪಾಧ್ಯಕ್ಷ ವಸಂತಗೌಡ, ನಗರಾಧ್ಯಕ್ಷ ರಾಘವೇಂದ್ರ ಎಸ್‌.ಎಸ್‌, ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ ಮುಖಂಡ ಆಂಬಾರಗೊಪ್ಪ ಶೇಖರಪ್ಪ,ಡಿ.ಎಲ್‌ ಬಸವರಾಜ್‌, ರುದ್ರಮುನಿ,ಬೆಣ್ಣೆ ಪ್ರವೀಣ, ಯುವರಾಜ, ಶಿವರಾಜ,ಫಕೀರಪ್ಪ,ಎಸ್‌,ವಿ.ಕೆ ಮೂರ್ತಿ, ರಮೇಶ್‌, ಎಸ್‌.ಎಂ ರಮೇಶ್‌, ವಿನಯ ಸೇಬು, ಮಲ್ಲೇಶಪ್ಪ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!