ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಬಿಗ್‌ಬಾಸ್ ಸೀಸನ್‌ನಲ್ಲಿ ಮಾತುಕತೆಗಿಂತ ಜಾಸ್ತಿ ಜಗಳಗಳೇ ನಡೆಯುತ್ತಿದೆ. ಅದರಲ್ಲಿಯೂ ನಾಮಿನೇಷನ್ ಎನ್ನುವುದನ್ನೂ ಗಮನದಲ್ಲಿ ಇಟ್ಟುಕೊಳ್ಳದೆ ಕಂಟೆಸ್ಟೆಂಟ್ಸ್ ಕಿತ್ತಾಡಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ಒಂದು ಗಂಭೀರ ಪ್ರಕ್ರಿಯೆಯಾಗಿದ್ದು, ಈ ವೇಳೆ ಇತರರು ಮಾತನಾಡುವಂತಿಲ್ಲ. ಆದರೂ ಜಗದೀಶ್ ಮಧ್ಯೆ ಮಧ್ಯೆ ಮಾತನಾಡಿದ್ದು, ಇತರರಿಗೆ ಕಿರಿಕಿರಿ ಆಗಿದೆ. ಈ ಕಾರಣಕ್ಕೆ ಕಿತ್ತಾಟ ಹೆಚ್ಚಾಗಿದ್ದು, ನಾಮಿನೇಷನ್ ಪ್ರಕ್ರಿಯೆ ನಿಲ್ಲಿಸಿ ಜಗಳ ಆಡಿದ್ದಾರೆ. ಇದರಿಂದ ಬಿಗ್‌ಬಾಸ್‌ಗೆ ಕೋಪ ಬಂದಿದೆ.
ಜಗದೀಶ್ ಹಾಗೂ ಮಂಜು ಏಕವಚನದಲ್ಲಿ ಕೂಗಾಡಿಕೊಂಡಿದ್ದಾರೆ. ಬಿಗ್ ಬಾಸ್ನ ಆದೇಶಕ್ಕೂ ಯಾರೂ ಕಿಮ್ಮತ್ತು ಕೊಟ್ಟಿಲ್ಲ. ಆ ಬಳಿಕ ಬಿಗ್ ಬಾಸ್ ‘ಸದ್ದು’, ಯಾರೂ ತುಟಿಕ್ ಪಿಟಿಕ್ ಅನ್ನದೇ ಕುಳಿತುಕೊಳ್ಳಿ ಎಂದು ಕೂಗಿದ್ದಾರೆ. ಆ ಬಳಿಕ ಎಲ್ಲರೂ ಶಾಂತರಾದರು.