ಕಾಂಗ್ರೆಸ್ ಶೆಹಜಾದ್ ಮಾತಿಗೆ ಬೇಸರಪಡಬೇಡಿ: ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಶೆಹಜಾದ್ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಸಮಯ ವ್ಯರ್ಥ ಮಾಡಬೇಡಿ. ಕಾಂಗ್ರೆಸ್ ನಾಯಕ ಈಗಾಗಲೇ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಇಂತಹ ಅವಮಾನ ಹೇಳಿಕೆಗಳು ನಿರಂತವಾಗಿ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶದ ಮೊರೆನಾದಲ್ಲಿ ಆಯೋಜಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಮತದಾರರೇ ನೀವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನನ್ನ ವಿರುದ್ಧ ಬಳಸಿದ ಭಾಷೆ, ಅವಹೇಳನದಿಂದ ಬೇಸರಪಡಬೇಡಿ. ಬಿಜೆಪಿಯ ಕಾಮ್ದಾರಿಗೆ, ಕಾಂಗ್ರೆಸ್ ನಾಮ್ದಾರಿಗಳು ಹಲವು ಬಾರಿ ಈ ರೀತಿ ಅವಹೇಳನ ಮಾಡಿದ್ದಾರೆ. ಬಡತನದಲ್ಲಿ ಬೆಳೆದ ನಾನು ಹಲವು ಬಾರಿ ಈ ರೀತಿಯ ಅವಮಾನ ಎದುರಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಯಾವುದೇ ನಿರ್ದಿಷ್ಠ ಹೇಳಿಕೆಯನ್ನು ಮುಂದಿಟ್ಟು ವಾಗ್ದಾಳಿ ನಡೆಸಿಲ್ಲ. ಆದರೆ ಮಾತಿನ ಆರಂಭದಲ್ಲೇ ಕೆಲವರು ಕಾಂಗ್ರೆಸ್ ಶೆಹಜಾದ್ ನನ್ನ ವಿರುದ್ದ ನೀಡಿದ ಹೇಳಿಕೆ, ಬಳಸಿದ ಭಾಷೆಯಿಂದ ನೊಂದಿದ್ದಾರೆ. ಈ ಮೂಲಕ ನಿಮ್ಮೆಲ್ಲರಲ್ಲಿ ನಾನು ವಿನಂತಿಸುತ್ತೇನೆ, ಇಂತಹ ಮಾತುಗಳಿಂದ ನೀವು ಯಾರೂ ಕೂಡ ಬೇಸರಗೊಳ್ಳಬೇಡಿ, ನಿರಾಶರಾಗಬೇಡಿ. ಆಕ್ರೋಶ ಹೊರಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಕಾರ್ಮಿಕರ, ಶ್ರಮಿಕರ ಪಕ್ಷ, ಈ ಆರೋಪ ಮಾಡುತ್ತಿರುವರು ರಾಜವಂಶದ ಪಕ್ಷ. ಹಿಂದಿನಿಂದಲು ರಾಜವಂಶ, ಶ್ರಮಿಕವರ್ಗದ ಮೇಲೆ ಅಪಾಮಾನ, ಆರೋಪ, ದಬ್ಬಾಳಿಕೆ ಮಾಡುತ್ತಲೇ ಬಂದಿದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!