ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನನ್ನು ಮೋದೀಜಿ, ಆದರಣೀಯ ಮೋದಿಜಿ ಎಂದು ಕರೆಯಬೇಡಿ ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ನನ್ನ ಹೆಸರಿನ ಮೊದಲು ಅಥವಾ ನಂತರ ವಿಶೇಷಣಗಳನ್ನು ಸೇರಿಸುತ್ತಿದ್ದೀರಿ ಇದರಿಂದ ನನ್ನ ಹಾಗೂ ಜನರ ನಡುವೆ ಅಂತರ ಉಂಟಾಗಬಹುದು ಎಂದು ಹೇಳಿದ್ದಾರೆ.
ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ಜನರು ನನ್ನನ್ನು ಅವರ ಕುಟುಂಬದವರೆಂದೇ ಪರಿಗಣಿಸುತ್ತಾರೆ. ಹಾಗಾಗಿ ಸಂಸದರೂ ಕೂಡ ನನ್ನನ್ನು ಅವರಲ್ಲೊಬ್ಬರು ಎಂದು ಭಾವಿಸಿ ಮಾತನಾಡಬೇಕು ಎಂದಿದ್ದಾರೆ.