ರೈತರ ಮನವಿಗೂ ಡೋಂಟ್ ಕೇರ್: ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗದಗ ಜಿಲ್ಲೆಯ ರೋಣ ಭಾಗದ ರೈತರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶಗೊಂಡಿದ್ದು, ತಮ್ಮ ಮನವಿಯನ್ನು ಸಿಎಂ ಸ್ವೀಕರಿಸಿಲ್ಲ ಅಂತ ಅನ್ನದಾತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೋಣದ ಹೆಲಿಪ್ಯಾಡ್‌ ಬಳಿ ಸಿಎಂ ಬರುತ್ತಾರೆ ಅಂತ ರೋಣ ಭಾಗದ ಅನ್ನದಾತರುಕಾದು ನಿಂತಿದ್ದರು. ಆದರೆ ಕಾರ್ಯಕ್ರಮ ಮುಗಿಸಿ ಹೆಲಿಪ್ಯಾಡ್ ಬಳಿ ಬಂದ ಸಿಎಂ ಸಿದ್ದರಾಮಯ್ಯ, ರೈತರ ಮನವಿ ಸ್ವೀಕರಿಸಿಲ್ಲ ಎನ್ನಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಮ್ಮ ಮನವಿಯನ್ನು ಸ್ವೀಕರಿಸದ ಸಿಎಂ ಸಿದ್ದರಾಮಯ್ಯ ವಿರುದ್ಧ ರೋಣ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಮನವಿ ನೀಡಲು ಬೆಳಗ್ಗೆ 11 ಗಂಟೆಯಿಂದ ರೈತರು ಕಾಯುತ್ತಿದ್ದರು. ಸಿಎಂ ಸಿದ್ದರಾಮಯ್ಯ ಹೆಲಿಪ್ಯಾಡ್ ಬಳಿ ಬರುತ್ತಿದ್ದಂತೆ ಮನವಿ ಪತ್ರ ನೀಡಲು ಮುಂದಾದರು.

ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಮನವಿ ಸಲ್ಲಿಸಲು ರೈತ ಹೋರಾಟಗಾರರು ಆಗಮಿಸಿ, ಸಿಎಂಗಾಗಿ ಕಾಯುತ್ತಿದ್ದರು. ಆದರೆ ರೈತರ ಮನವಿ ಸ್ವೀಕರಸದೇ ಸಿಎಂ ಸಿದ್ದರಾಮಯ್ಯ ಹಾಗೇ ತೆರಳಿದ್ದಾರೆ. ಇದೇ ಕಾರಣಕ್ಕೆ ಸಿಎಂ ವಿರುದ್ಧ ಸಿಟ್ಟಾದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here