ಇಂಗ್ಲೀಷ್ ಮಾತನಾಡಬೇಕು ಅಂತಾ ಕನ್ನಡ ಮರಿಬೇಡಿ: ಸುಧಾಮೂರ್ತಿ ಕಿವಿಮಾತು

ಹೊಸದಿಂಗತ ಡಿಜಿಟಲ್ ಡೆಸ್ಕ್:

ಬ್ರ್ಯಾಂಡ್‌ ಬೆಂಗಳೂರು ಯೋಜನೆಯ ಮೂಲಕ ಬೆಂಗಳೂರು ಸ್ವಚ್ಛ, ಹಸಿರು ಮತ್ತು ಸುಸ್ಥಿರ ನಗರವಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಯುವ ನಾಯಕತ್ವ ಸಮಾವೇಶವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ INFOSIS ಮುಖ್ಯಸ್ಥೆ ಸುಧಾಮೂರ್ತಿ, ಜನರು ಇಂಗ್ಲೀಷ್ ಮಾತನಾಡಬೇಕು ಮತ್ತು ಕನ್ನಡವನ್ನು ಬಿಟ್ಟು ಹೋಗಬಾರದು.

ಬ್ರ್ಯಾಂಡ್ ಬೆಂಗಳೂರು ಅಂದ್ರೆ ಕನ್ನಡ. ಮಕ್ಕಳ ಮನಸ್ಸು ಅನಿರೀಕ್ಷಿತ. ನಾನು ಮಕ್ಕಳ ಪುಸ್ತಕವನ್ನು ಬರೆಯುವಾಗ, ನಾನು ಮಕ್ಕಳನ್ನ ಕೇಳುತ್ತೇನೆ. ಏನಾದ್ರೂ ತಪ್ಪಿದ್ರೆ ದಯವಿಟ್ಟು ನನಗೆ ತಿಳಿಸಿ. ಬ್ರೈಟ್ ಐಡಿಯಾ ಬರೋದೇ ಮಕ್ಕಳಿಂದ. ಎಲ್ಲಾ ನಗರಗಳಲ್ಲೂ ಸಮಸ್ಯೆಗಳಿವೆ. ಇನ್ನಾದರೂ ಸಮಸ್ಯೆ ಪರಿಹಾರಕ್ಕೆ ಶ್ರಮಿಸಬೇಕು ಎಂದು ಸುಧಾಮೂರ್ತಿ ಹೇಳಿದರು.

ಬೆಂಗಳೂರು ಒಂದು ಸಂಚಲನ ಎಂದು ಅಂದು ಹೇಳಿದ್ದ ಡಿಸಿಎಂ ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆ, ಭಾವುಕರಾಗಿದ್ದಾರೆ. ಬ್ರಾಂಡ್ ಬೆಂಗಳೂರು ನಾವೆಲ್ಲರೂ ಈ ಕಲ್ಪನೆಯ ರಾಯಭಾರಿಗಳು. ಬ್ರ್ಯಾಂಡ್ ಬೆಂಗಳೂರು ಅನ್ನು ನಿರ್ಮಿಸಲು ನಮಗೆ ನಿಮ್ಮ ಆಲೋಚನೆಗಳು ಬೇಕಾಗುತ್ತವೆ. ಕ್ರಿಯಾಶೀಲ ನಾಗರಿಕರಾಗಿ ಎಲ್ಲರೂ ಕೊಡುಗೆ ನೀಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!