ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೇಹದ ಪ್ರತಿ ಅಂಗಗಳ ಆರೋಗ್ಯವೂ ಮನುಷ್ಯನಿಗೆ ಮುಖ್ಯವಾಗಿರುತ್ತದೆ. ಆದರೆ ಕಣ್ಣು ಎಲ್ಲದಕ್ಕಿಂತಲೂ ಪ್ರಮುಖವಾದದ್ದು ಎಂಬುದನ್ನು ಕೂಡ ನೆನಪಿನಲ್ಲಿಡಬೇಕು.
ಕಣ್ಣಿನ ಆರೋಗ್ಯದ ಬಗ್ಗೆ ಹಲವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಅದು ತಪ್ಪು ಏಕೆಂದರೆ ಜೀವನದುದ್ದಕ್ಕೂ ಕಣ್ಣು ನಿಮ್ಮ ಆಸ್ತಿಯಾಗಿ ಪರಿಣಮಿಸಿರುತ್ತದೆ. ಹಾಗಾದ್ರೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನೀವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯೋಣ.
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ತಪ್ಪುಗಳನ್ನು ಮಾಡದಿರಿ :
* ಕಣ್ಣು ತೊಳೆಯಲು ಬೆಚ್ಚಗಿನ ನೀರನ್ನು ಬಳಸುವುದನ್ನು ಎಂದಿಗೂ ಮಾಡದಿರಿ.
* ಕಣ್ಣುಗಳನ್ನು ಆಗಾಗ್ಗೆ ಮಿಟುಕಿಸದೆ ಇರುವುದು ಕೂಡ ತಪ್ಪು. ಇದರಿಂದ ನಿಮ್ಮ ಕಣ್ಣುಗಳು ಒಣಗಿದಂತಾಗಿ ಕಳೆಗುಂದುತ್ತವೆ.
* ಕಣ್ಣಿನ ಸಮಸ್ಯೆಗಳು ಎದುರಾದಾಗ ಕೃತಕ ಕಣ್ಣಿನ ಹನಿ/ ಐ ಡ್ರಾಪ್ಸ್‌ಗಳನ್ನು ಅತಿಯಾಗಿ ಬಳಸುವುದನ್ನು ತಪ್ಪಿಸಿ.
* ನೀವು ಮಲಗಲು ಕಣ್ಣಿನ ಮುಖವಾಡಗಳನ್ನು ಬಳಸುವುದು ಕೂಡ ಕಣ್ಣಿನ ಆರೋಗ್ಯಕ್ಕೆ ಹಾನಿಯಾಗುತ್ತದೆ.
* ನೀವು ಪದೇ ಪದೇ ಕಣ್ಣುಗಳನ್ನು ಉಜ್ಜುವುದರಿಂದಲೂ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಎದುರೀಸಬೇಕಾದೀತು.