ಶ್ರಾವಣ ಮಾಸದಲ್ಲಿ ನಾನ್‌ವೆಜ್‌ ತಿನ್ನಬೇಡಿ, ಯಾಕೆ ಗೊತ್ತಾ? ಸೈಂಟಿಫಿಕ್‌ ರೀಸನ್‌ ಇದೆ..

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡೋದಿಲ್ಲ. ದೇವರ ಪೂಜೆ, ವ್ರತ ಸಾಕಷ್ಟು ಇರುವ ಕಾರಣ ಒಂದು ತಿಂಗಳು ಮಾಂಸ ಇಲ್ಲದೆ ಸಸ್ಯಾಹಾರ ಸೇವನೆ ಮಾಡಲಾಗುತ್ತದೆ. ಆದರೆ ಈಗೆಲ್ಲ ಇದನ್ನು ಫಾಲೋ ಮಾಡುವುದು ಕಡಿಮೆಯಾಗಿದೆ. ಜಿಮ್‌ಗೆ ಹೋಗುವವರು, ಫಿಟ್ನೆಸ್‌ ಬೇಕು ಎನಿಸಿದವರು ಹಾಗೂ ಮಾಂಸಪ್ರಿಯರು ನಾನ್‌ವೆಜ್‌ ತಿಂದೇ ತಿನ್ನುತ್ತಾರೆ. ಈ ಟೈಮ್‌ನಲ್ಲಿ ಯಾಕೆ ತಿನ್ಬಾರ್ದು ಗೊತ್ತಾ?

ಮುಖ್ಯವಾಗಿ ಮಳೆಗಾಲ ಜಲಚರಗಳಿಗೆ ಸಂತಾನೋತ್ಪತ್ತಿಯ ಸಂದರ್ಭವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಮನುಷ್ಯರು ಮೀನು ಹಿಡಿದು ತಿನ್ನುತ್ತಿದ್ದರೆ ಆಗ ಜಲಚರಗಳ ಸಂತಾನೋತ್ಪತ್ತಿ ಕ್ರಿಯೆಗೆ ಅಡ್ಡಿಪಡಿಸಿದಂತಾಗುತ್ತದೆ. ಅಷ್ಟೇ ಅಲ್ಲ ಮೀನುಗಳ ಸಂಖ್ಯೆ ಕಡಿಮೆಯಾಗಿ ಅದರಿಂದ ಸೃಷ್ಟಿಯ ಲಯ ತಪ್ಪುತ್ತದೆ. ಆದ್ದರಿಂದ ಈ ಸಮಯದಲ್ಲಿ ಮೀನುಗಳು ಸೇರಿದಂತೆ ಬಹುತೇಕ ಮಾಂಸಾಹಾರವನ್ನು ತಿನ್ನುವುದಿಲ್ಲ.

ಇನ್ನು ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗಿರುವ ಸಂಭವವಿದೆ. ಆ ನೀರಿನಲ್ಲೇ ವಾಸಿಸುವ ಮೀನುಗಳು ಅಥವಾ ಕಲುಷಿತ ನೀರಿಗೆ ಅವಲಂಬಿತವಾಗಿರುವ ಅನೇಕ ಪ್ರಾಣಿಗಳಿಗೆ ನೀರಿನಿಂದ ಬರುವ ನಾನಾ ಖಾಯಿಲೆಗಳು ಬಂದಿರಬಹುದು. ಆದ್ದರಿಂದ ರಕ್ಷಣೆಗೆ ಸಸ್ಯಾಹಾರ ಸೂಕ್ತ ಎಂದು ಹಿರಿಯರು ಹೇಳಿದ್ದಾರೆ.

ಮತ್ತೊಂದು ಪ್ರಮುಖ ಕಾರಣವೆಂದರೆ, ಶ್ರಾವಣ ಮಾಸದಲ್ಲಿ ಮಳೆಗಾಲ ಮುಗಿದಿರುವುದಿಲ್ಲ ಹಾಗಾಗಿ ಬಿಸಿಲಿನ ಅಭಾವ ಇರುತ್ತದೆ. ಹೆಚ್ಚು ಬೆಳಕಿರುವುದಿಲ್ಲ. ಹೀಗಾಗಿ ನಮ್ಮ ದೇಹದ ಜೀರ್ಣಕ್ರಿಯೆ ಕೂಡ ಹೆಚ್ಚು ಚುರುಕಾಗಿ ಇರುವುದಿಲ್ಲ. ಇದರಿಂದ ಮಾಂಸಾಹಾರದಂತಹ ಕಠಿಣ ಪದಾರ್ಥವನ್ನು ದೇಹ ಸರಿಯಾಗಿ ಜೀರ್ಣಿಸುವುದು ಕಷ್ಟ. ಆದ್ದರಿಂದ ಈ ಮಾಸದಲ್ಲಿ ಸಸ್ಯಾಹಾರ ಸೇವಿಸುವುದು ಉತ್ತಮ ಎನ್ನುವ ಲೆಕ್ಕಾಚಾರವಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!