ಯಾವುದೇ ಸ್ಲೀವ್‌ಲೆಸ್ ಅಥವಾ ಪ್ಯಾಟರ್ನ್ ಡ್ರೆಸ್ ಹಾಕಿಕೊಳ್ಳೋದಕ್ಕೆ ಹಿಂದುಮುಂದು ನೋಡ್ತೀರಾ? ದಪ್ಪ ಇದ್ದೀನಿ ಅನ್ನೋ ಕಾರಣಕ್ಕೆ ಸ್ಟೈಲ್ ಮಾಡೋದಕ್ಕೆ ಹೆದರಬೇಡಿ. ನಿಮ್ಮ ಬಾಡಿಗೆ ತಕ್ಕಂಥ ಬಟ್ಟೆಗಳನ್ನು ಧರಿಸಿ ಕಾನ್ಫಿಡೆನ್ಸ್‌ನಲ್ಲಿ ನಡೆದರೆ ಎಲ್ಲರೂ ನಿಮ್ಮ ಕಡೆ ಒಮ್ಮೆ ತಿರುಗಿನೋಡ್ತಾರೆ..
ನೀವು ಎಷ್ಟು ಉದ್ದವಾದ್ರೂ ಇರಿ, ಇನ್ನಷ್ಟು ಉದ್ದ ಕಾಣೋ ರೀತಿಯ ಬಟ್ಟೆಗಳನ್ನು ಹಾಕಿ. ಡ್ರೆಸ್ ಶಾರ್ಟ್ ಬೇಡ, ಲಾಂಗ್ ಇರಲಿ, ಹೈ ವೇಸ್ಟ್ ಪ್ಯಾಂಟ್ ಹಾಕಿ.
ನಿಮ್ಮ ಬಾಡಿ ಶೇಪ್ ತೋರಿಸೋದಕ್ಕೆ ನಾಚಿಕೆ ಬೇಡ, ಇರೋದು ಇದ್ದೇ ಇರುತ್ತದೆ ಅಲ್ವಾ? ಬಾಡಿ ಹಗ್ಗಿಂಗ್ ಬಟ್ಟೆಗಳನ್ನು ಹಾಕಿ.
ಸೊಂಟಕ್ಕೆ ಬೆಲ್ಟ್ ಅಥವಾ ಬಟ್ಟೆಯನ್ನು ಕಟ್ಟುವ ಡ್ರೆಸ್‌ಗಳು ಸೂಟ್ ಆಗುತ್ತವೆ.
ಫ್ಲೋ ಆಗುವ ರೀತಿಯ ಕಂಫರ್ಟ್ ಸ್ಟೈಲ್ ಆರಿಸಿಕೊಳ್ಳಿ.
ರಿಲ್ಯಾಕ್ಸ್ ಆದ, ಜಾಸ್ತಿ ಪ್ಯಾಟರ್ನ್ಸ್ ಇಲ್ಲದ ಬಟ್ಟೆಗಳನ್ನು ಆಯ್ಕೆ ಮಾಡಿ.
ಜಾಕೆಟ್ಸ್, ಕೋಟ್ಸ್, ವೇಸ್ಟ್ ಕೋಟ್ಸ್ ನಿಮ್ಮ ಬೆಸ್ಟ್ ಫ್ರೆಂಡ್