ಭಾರತದ ಮೇಲೆ ಪ್ರತಿದಾಳಿ ಬಗ್ಗೆ ಯೋಚ್ನೆನೂ ಮಾಡ್ಬೇಡಿ: ಪಾಕ್‌ಗೆ ಹೇಳಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಮೇಲೆ ಪ್ರತಿ ದಾಳಿ ಮಾಡುವ ಆಲೋಚನೆಯನ್ನು ಕೂಡ ಮಾಡಬೇಡಿ ಎಂದು ಅಮೆರಿಕ ಪಾಕಿಸ್ತಾನಕ್ಕೆ ಅಮೆರಿಕ ತಾಕೀತು ಮಾಡಿದೆ.

ಪಾಕಿಸ್ತಾನದ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದ ಪ್ರತಿ ದಾಳಿಯ ಯೋಜನೆ ಈಗ ದುರ್ಬಲಗೊಳ್ಳುತ್ತಿರುವಂತೆ ಕಾಣುತ್ತಿದೆ.

ನೀವು ದಾಳಿ ಮಾಡಿದ್ರೆ ನಾವು ಪ್ರತಿದಾಳಿ ಮಾಡ್ತೀವಿ ಎಂದು ಅಮೆರಿಕ ಎಚ್ಚರಿಕೆ ಕೊಡುತ್ತಲೇ ಇತ್ತು. ಆದರೆ ಭಾರತದ ದಾಳಿಗೆ ಪಾಕ್ ಭಯಪಟ್ಟಂತೆ ತೋರುತ್ತಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಇಂದು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಭಾರತವು ಆಪರೇಷನ್ ಸಿಂಧೂರ್ ಮೂಲಕ ದಾಳಿ ನಡೆಸಿದ್ದರು.

ಈ ಮಧ್ಯೆ ಅಮೆರಿಕ ಕೂಡ ಕಠಿಣ ನಿಲುವು ತಳೆದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಭಾರತದ ಮಿಲಿಟರಿ ಕ್ರಮಕ್ಕೆ ಪಾಕಿಸ್ತಾನ ಪ್ರತಿಕ್ರಿಯಿಸುವ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಎಂದು ಹೇಳಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!