ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಿಜೆಪಿ ಜುಗ್ಗಿ ನಿವಾಸಿಗಳಿಗೆ 3,000 ರೂಪಾಯಿಗಳನ್ನು ನೀಡುವ ಮೂಲಕ ಮತ್ತು ಚುನಾವಣಾ ಆಯೋಗದ ಮೂಲಕ ಮನೆಮನೆಗೆ ಮತದಾನದ ಭರವಸೆ ನೀಡುವ ಮೂಲಕ ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡಿದ ಕೇಜ್ರಿವಾಲ್, “ಇಂದು, ನನಗೆ ಜುಗ್ಗಿಗಳಿಂದ ಅನೇಕ ಕರೆಗಳು ಬಂದಿವೆ, ಬಿಜೆಪಿ ಪಕ್ಷವು ಮನೆ ಮನೆಗೆ ಹೋಗಿ ಅಲ್ಲಿ ವಾಸಿಸುವ ಜನರಿಗೆ ಕೇಳುತ್ತಿದೆ – 3,000 ರೂ ತೆಗೆದುಕೊಳ್ಳಿ, ಮತ್ತು ಚುನಾವಣಾ ಆಯೋಗವು ಮನೆಮನೆಗೆ ಮತದಾನ ಮಾಡಲು ಅನುಕೂಲ ಮಾಡುತ್ತದೆ. ಇದನ್ನು ಕೇಳಿದಾಗ ನನಗೆ ಆಘಾತವಾಯಿತು, ಇದು ನಿಮ್ಮನ್ನು ಬಲೆಗೆ ಬೀಳಿಸುವ ಸಂಚು. ಬಲೆಗೆ ಬೀಳದಂತೆ ಜನರನ್ನು ಎಚ್ಚರಿಸಿದ ದೆಹಲಿ ಮುಖ್ಯಮಂತ್ರಿ, ವಿಷಯದ ಬಗ್ಗೆ ಕೇಳಿದ ನಂತರ ನಿದ್ದೆ ಬರಲಿಲ್ಲ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಬಿಜೆಪಿಗೆ ಮತ ಹಾಕಬೇಡಿ ಎಂದು ಜನರನ್ನು ಒತ್ತಾಯಿಸಿದರು “ಅವರು ನಿಮಗೆ ಉಚಿತವಾಗಿ ಹಣವನ್ನು ನೀಡುತ್ತಿದ್ದರೆ, ಅದನ್ನು ತೆಗೆದುಕೊಳ್ಳಿ, ಆದರೆ ಅವರಿಗೆ ಮತ ಹಾಕಬೇಡಿ” ಎಂದು ತಿಳಿಸಿದ್ದಾರೆ.
ನಕಲಿ ರಾಷ್ಟ್ರವಾದಿಗಳ ಪಕ್ಷ ಸಾವಿರಾರು ಕೋಟಿ ಚಂದಾ ಸಂಗ್ರಹಿಸಿದೆ,,ಈ ಮೊತ್ತ ಬಹಿರಂಗಪಡಿಸಿದ್ದು, ಅನ್ ಡಿಕ್ಲೇರ್ಡ್ ಇನ್ನೆಷ್ಟು ಸಾವಿರ ಕೋಟಿ ಇದೆಯೋ ಶ್ರೀರಾಮನೇ ಬಲ್ಲ,, ಇಂಥವರು ಇಡೀ ಚುನಾವಣೆಯನ್ನೇ ಅದ್ಯಾಕೆ ಚಿಕ್ಕ ಪುಟ್ಟ ಪ್ರಾದೇಶಿಕ ಪಕ್ಷಗಳನ್ನೇ ಖರೀದಿಸಬಹುದು,, ಇತ್ತೀಚೆಗೆ ಕುಂಭಮೇಳದಲ್ಲಿ ಡುಮ್ಕಿ ಹೊಡೆದು ಹಿಂದಿನ ಎಲ್ಲಾ ಪಾಪಗಳನ್ನು ಗಂಗಾ ಮಾತೆಯ ಒಡಲಲ್ಲಿ ಬಿಟ್ಟು ಮುಂದಿನ ಕಂತಿಗೆ ರೆಡಿಯಾಗಿ ಬಂದಿದ್ದಾರೆ,,