ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಕೋವಿಡ್ ಉಪತಳಿ ಜೆಎನ್1 ಉಪಟಳ ಹೆಚ್ಚಾಗಿದ್ದು, ಇಂದು ಎಲ್ಲ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ಜತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ವರ್ಚ್ಯುಯಲ್ ಸಭೆ ನಡೆಸಿದ್ದಾರೆ.
ಯಾವ ರಾಜ್ಯದಲ್ಲಿ ಎಷ್ಟು ಕೋವಿಡ್ ಪ್ರಕರಣಗಳಿವೆ, ಕೋವಿಡ್ ಹೆಚ್ಚದಂತೆ ತಡೆಯಲು ಯಾವ್ಯಾವ ಮಾರ್ಗ ಅನುಸರಿಸಲಾಗಿದೆ, ಕೋವಿಡ್ ಬಂದರೆ ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಎಲ್ಲ ಮಾಹಿತಿಯನ್ನು ಸಚಿವರು ಪಡೆದಿದ್ದಾರೆ.
ಕಷ್ಟದ ಸಮಯದಲ್ಲಿ ಸರ್ಕಾರ ಸದಾ ಜನರೊಟ್ಟಿಗಿದೆ, ಇದು ಒಟ್ಟಾಗಿ ಕೆಲಸ ಮಾಡುವ ಸಮಯ. ಕೋವಿಡ್ ಬಗ್ಗೆ ಭೀತಿ ಬೇಡ, ಜಾಗರೂಕತೆ ಅವಶ್ಯವಾಗಿದೆ ಎಂದಿದ್ದಾರೆ.
ಕೇರಳದಲ್ಲಿ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇರಳದಲ್ಲೇ 292 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟಾರೆ 2,041ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಸೋಂಕಿನ ಬಗ್ಗೆ ಆತಂಕ ಬೇಡ, ಸೋಂಕಿನ ವಿರುದ್ಧ ಹೋರಾಡಲು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
#WATCH | Union Health Minister Dr Mansukh Mandaviya in Delhi holds a high-level review meeting with all States/UTs on the preparedness of health facilities and services, in view of the recent upsurge in respiratory illnesses such as Influenza-like Illness, Severe Acute… pic.twitter.com/8eksMLaxjL
— ANI (@ANI) December 20, 2023