ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಸೈಟ್ ಹಗರಣ ಕೇಸ್‌ನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಸಾಮಾನ್ಯ ವ್ಯಕ್ತಿಯಂತೆ ವಿಚಾರಣೆ ಎದುರಿಸಿದ್ದಾರೆ.
ನಾನು ಸಿಎಂ ಅಂತ ಅಂಜಿಕೆ ಪಡ್ಕೋಬೇಡಿ, ಆರಾಮಾಗಿ ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿದ್ದಾರೆ. ನಾನು ಈ ಕ್ಷಣಕ್ಕೆ ನಿಮಗೆ ಸಿಎಂ ಅಲ್ಲ. ನೀವು ಒಂದ್ ಕೇಸ್‌ನಲ್ಲಿ ನನಗೆ ನೋಟಿಸ್ ಕೊಟ್ಟು ಕರೆಸಿದ್ದೀರಾ, ನಾನು ಬಂದಿದ್ದೇನೆ. ನಿಮ್ಮ ಪ್ರೊಸಿಜರ್ ಹೇಗಿದೆಯೋ ಹಾಗೆ ಮಾಡಿ ಎಂದು ಫಾರ್ಮಲ್ ಆಗಿ ಹೇಳಿದ್ದಾರೆ.
ಇನ್ನು ನಿಮ್ಮ ಪ್ರಶ್ನೆಗಳು ಹೇಗಿದ್ಯೋ ಅದನ್ನು ಕೇಳಿ, ನೀವು ಏನು ಬೇಕಾದ್ರು ಕೇಳಿ ನನಗೆ ಗೊತ್ತಿರೋದನ್ನು ಹೇಳಿಯೇ ಹೇಳ್ತೇನೆ, ಹಾಗೇ ಕಾನೂನಿನ ಅವಕಾಶ ಇದ್ದರೆ ನನಗೊಂದು ಲೋಟ ಕಾಫಿ ಕೊಡಿಸಿ. ನಾನು ಸಿಎಂ ಬ್ಯುಸಿ ಇರ್ತೇನೆ ಅಂತೆಲ್ಲ ಅರ್ಜೆಂಟ್ ಮಾಡ್ಕೋಬೇಡಿ, ಕಾಲಾವಕಾಶ ತೆಗೆದುಕೊಂಡು ವಿಚಾರಣೆ ಮಾಡಿ. ಮಧ್ಯ ಬ್ರೇಕ್‌ಗೆ ಅವಕಾಶ ಇದ್ರೆ ಕೊಡಿ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.