September 29, 2026
Tuesday, September 29, 2026
spot_img

ದಿನಭವಿಷ್ಯ: ಇಂದು ಕುಟುಂಬದವರಿಗೆ ಭಾವನಾತ್ಮಕ ಬೆಂಬಲ ನೀಡುವುದನ್ನು ಮರೆಯಬೇಡಿ

ಮೇಷ
ಅವಿಶ್ರಾಂತ ಕೆಲಸ. ಉದಾಸ ಭಾವ, ಬೇಸರ. ಸಂಜೆ ವೇಳೆ ಆಪ್ತರ ಜತೆ ಕಾಲ ಕಳೆಯಿರಿ.  ಮನೋಲ್ಲಾಸ ಪಡೆಯಿರಿ.  ಆರ್ಥಿಕ ಬಿಕ್ಕಟ್ಟು.        
ವೃಷಭ
ಬೇಸರದ ಮನಸ್ಸು. ಕೆಲವು ಬೆಳವಣಿಗೆ ಅದಕ್ಕೆ ಕಾರಣ. ಕೆಲಸದಲ್ಲಿ ಏಕಾಗ್ರತೆ ಮೂಡದು.  ವಾಗ್ವಾದದಿಂದ ದೂರವಿರಿ.  ಹಣದ ಕೊರತೆ.
ಮಿಥುನ
 ಹೆಚ್ಚಿನ ಹೊಣೆ ಬೀಳಲಿದೆ. ಬಂಧುಗಳಿಂದ ಟೀಕೆ. ಕೀಲು ನೋವು ಬಾಧೆ. ಸೂಕ್ತ ಚಿಕಿತ್ಸೆ ಪಡೆಯಿರಿ. ಇಷ್ಟದೇವರ ಪ್ರಾರ್ಥನೆ ಮಾಡಿ.
ಕಟಕ
ಉದಾಸೀನತೆ ನಿಮ್ಮ ದಿನ ಹಾಳು ಮಾಡೀತು. ಚುರುಕಿನಿಂದ ಇರಲು ಕಲಿಯಿರಿ. ಹೊಟ್ಟೆಯ ಸಮಸ್ಯೆ ಕಾಡಬಹುದು.  ಯುಕ್ತ ಆಹಾರ ಒಳಿತು.  
ಸಿಂಹ
ವ್ಯವಹಾರದಲ್ಲಿ ಒಳಿತಾಗಲಿದೆ. ಆರ್ಥಿಕ ಉನ್ನತಿ. ಸಮಸ್ಯೆ ಇದ್ದರೆ ನಿವಾರಣೆ. ಆದರೆ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾದೀತು.
ಕನ್ಯಾ
ಕೆಲದಿನಗಳಿಂದ ಕಾಡುತ್ತಿದ್ದ ದೈಹಿಕ ನೋವು ನಿವಾರಣೆ. ಆರ್ಥಿಕ ಒತ್ತಡ ಅಽಕ. ಇತರರ ನೆರವು ಸಿಗಲಾರದು. ಭಾವನಾತ್ಮಕ ಏರುಪೇರು.
ತುಲಾ
ಭಾವನೆಗಿಂತ ವಿವೇಕಕ್ಕೆ ಗಮನ ಕೊಡಿ. ಆಪ್ತರ ತಪ್ಪುಗಳ ಬಗ್ಗೆ ಕುರುಡಾಗಿ ವರ್ತಿಸದಿರಿ.ಹಣದ ವ್ಯವಹಾರದಲ್ಲಿ ಎಚ್ಚರ ಅವಶ್ಯ.
ವೃಶ್ಚಿಕ
 ಕುಟಂಬಸ್ಥರಿಗೆ ಭಾವನಾತ್ಮಕ ಬೆಂಬಲದ ಅಗತ್ಯವಿದೆ. ಅವರ ಕಷ್ಟಕಾಲದಲ್ಲಿ ನೆರವಿಗೆ ನಿಲ್ಲಿ. ಕೆಲಸದ ಒತ್ತಡದಿಂದ ದೂರವಿರಿ.    
ಧನು
 ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪೂರಕ ಬೆಳವಣಿಗೆ.  ಕೌಟುಂಬಿಕ ವಿಷಯದಲ್ಲಿ ಸಹನೆ ಕಾಯ್ದುಕೊಳ್ಳಿ. ಮಾತಿಗೆ ಮಾತು ಬೆಳೆಸಬೇಡಿ.        
ಮಕರ
ಕೆಲದಿನಗಳ ಒತ್ತಡ ನಿವಾರಣೆ. ಅಶಾಂತ ಮನಸ್ಸು ತಹಬಂದಿಗೆ ಬರಲಿದೆ. ಸಮಸ್ಯೆಗೆ ಪರಿಹಾರದ ದಾರಿ ತೋರಿಬಂದೀತು.
ಕುಂಭ
ಸಂತೋಷ, ದುಃಖ ಎರಡನ್ನೂ ಅನುಭವಿಸುವಿರಿ. ಅತಿಯಾದ ಭಾವುಕತೆ ಒಳಿತಲ್ಲ. ಅದರಿಂದ ನೋವೇ ಹೆಚ್ಚು ಅರಿಯಿರಿ.    
 ಮೀನ
 ಇತ್ತೀಚಿನ ಸಮಸ್ಯೆಗಳು ಪರಿಹಾರ ಕಾಣುವವು. ಆದರೂ ಮನಸ್ಸು  ಶಾಂತಿ ಕಾಣದು. ಮನೋವ್ಯಥೆ. ಆಂಜನೇಯನ ಸ್ತುತಿಸಿರಿ. 

Must Read