ARTICLE | ಲೇಟಾದ್ರೆ ಕಿರಿಕಿರಿ ಮಾಡ್ಕೋಬೇಡಿ, ‘Burnt Toast Theory’ ಬಗ್ಗೆ ಓದಿ ನೋಡಿ..

ಒಂಬತ್ತು ಗಂಟೆಗೆ ಆಫೀಸ್‌ನಲ್ಲಿ ಇರಬೇಕು ಅಂದ್ರೆ ಎಂಟು ಗಂಟೆಗೆ ಮನೆ ಬಿಡ್ಲೇಬೇಕು, ಐದು ನಿಮಿಷ ಆಚೀಚೆ ಆದ್ರೂ ಕಿರಿಕಿರಿ ಆಗೋದು ಗ್ಯಾರೆಂಟಿ. ಎಂಟು ಗಂಟೆಯೊಳಗೆ ಬಾಕ್ಸ್‌ಗೆ ಊಟ, ಮನೆ ಕೆಲಸ ಅಥವಾ ಇನ್ಯಾವುದೋ ಕೆಲಸ ಮಾಡಿ ಟೈಮ್‌ ಆಗೋಗಿದೆ. ಇರಿಟೇಟ್‌ ಆಗಿರ್ತೀರಿ. ಅಲ್ವಾ?

ಇದು ಎಲ್ಲರ ಮನೆ ಕಥೆ, ಕೆಲವೊಮ್ಮೆ ಎಷ್ಟೇ ಬೇಗ ಎದ್ದು ಎಲ್ಲ ತಯಾರಾದ್ರೂ ಲಾಸ್ಟ್‌ ಮಿನಿಟ್‌ ಬದಲಾವಣೆಗಳು ಇದ್ದೇ ಇರುತ್ತವೆ. ಈ ರೀತಿ ಗಾಬರಿ ಆಗೋರು ನೀವಾಗಿದ್ರೆ ಬರ್ನ್ಟ್‌ ಟೋಸ್ಟ್‌ ಥಿಯರಿ ಬಗ್ಗೆ ತಿಳಿದುಕೊಳ್ಳಿ..

ಬೆಳಗಿನ ತಿಂಡಿ ಅಥವಾ ಟೋಸ್ಟ್‌ ಮೇಕರ್‌ನಲ್ಲಿ ಬ್ರೆಡ್‌ ಹಾಕಿದಾಗ ಬ್ರೆಡ್‌ ಸೀದು ಹೋದ್ರೆ, ಎಷ್ಟು ಕೋಪ ಬರುತ್ತದೆ ಅಲ್ವಾ? ಅಥವಾ ತಿಂಡಿ ರುಚಿ ಹಾಳಾದ್ರೆ, ಬೀಳಿಸಿಕೊಂಡ್ರೆ ಇನ್ನೇನೋ ಆಗಿ ಒಂದೆರಡು ನಿಮಿಷ ತಡ ಆಯ್ತು ಎಂದೇ ಇಟ್ಟುಕೊಳ್ಳಿ.

ಈ ರೀತಿ ತಡ ಆಗಿದ್ದು ಒಳ್ಳೆಯದೇ ಎಂದು ಬರ್ನ್ಟ್‌ ಟೋಸ್ಟ್‌ ಥಿಯರಿ ಹೇಳುತ್ತದೆ. ಬ್ರೆಡ್‌ ಸೀದು ಹೋದ ಕಾರಣ ಬೇರೆ ಬ್ರೆಡ್‌ ಮಾಡಿಕೊಂಡು ತಿಂದು ಒಂದೆರಡು ನಿಮಿಷ ಲೇಟಾಗಿ ಹೋದರೆ, ರಸ್ತೆಯಲ್ಲಿ ಆಗಬೇಕಿದ್ದ ದೊಡ್ಡ ಆಕ್ಸಿಡೆಂಟ್‌ ಅಥವಾ ಇನ್ಯಾವುದೋ ತಾಪತ್ರಯದಿಂದ ನೀವು ಬಚಾವ್‌ ಆಗಿ, ಮತ್ತೊಂದು ಚಾನ್ಸ್‌ ಸಿಕ್ಕಿದೆ ಎಂದರ್ಥ.

ಆ ಎರಡು ನಿಮಿಷದ ಗ್ಯಾಪ್‌ನಿಂದಾಗಿ ಯಾವುದಾದರೂ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಅಥವಾ ಕೆಟ್ಟ ವ್ಯಕ್ತಿಯ ಭೇಟಿ ಆಗೋದು ಇಲ್ಲ ಎನ್ನೋದು ಥಿಯರಿಯ ಅರ್ಥವಾಗಿದೆ.

ಏನೇ ಹೇಳಿ ಆಗೋದೆಲ್ಲಾ ಒಳ್ಳೆದಕ್ಕೆ ಅಂದುಕೊಂಡು ಮುಂದುವರಿಯುವುದು ಉತ್ತಮ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!