ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮಹತ್ವದ ಸೂಚನೆ ನೀಡಿದ್ದು, ತಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿ ಮತ್ತು ಭದ್ರತೆ, ಶಾಂತಿ ಬಯಸುವುದಾದರೆ ತಮ್ಮ ನೆಲದಲ್ಲಿ ಅಮೆರಿಕ ಮತ್ತು ಇಸ್ರೇಲ್ ಸೇನೆಗೆ ಸ್ಥಳಾವಕಾಶ ನೀಡಬೇಡಿ ಎಂದು ಸಲಹೆ ನೀಡಿದೆ.
ಈ ಕುರಿತು ಹಲವು ಬಾರಿ ಹೇಳಿದ್ದೇನೆ, ಮತ್ತೆ ಹೇಳುತ್ತಿದ್ದೇನೆ, ನಿಮ್ಮ ದೇಶದ ಅಭಿವೃದ್ಧಿ ಮತ್ತು ಭದ್ರತೆ ಕುರಿತು ಕಾಳಜಿ ಇದ್ದರೆ ನಿಮ್ಮ ಭೂಮಿಯಿಂದ ಶತ್ರುಗಳಿಗೆ ಯುದ್ಧವನ್ನು ನಡೆಸಲು ಬಿಡಬೇಡಿ. ನಮ್ಮ ಮೂಲಸೌಕರ್ಯ ಹಾಗೂ ಆರ್ಥಿಕ ಕೇಂದ್ರಗಳ ಮೇಲೆ ದಾಳಿಯಾದರೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾದ ದಿನದಿಂದ ಅಮೆರಿಕವು ಇರಾನ್ನ ಮೇಲೆ ದಾಳಿಗೆ ಗಲ್ಫ್ ದೇಶಗಳ ಮಿಲಿಟರಿ ನೆಲೆಗಳನ್ನು ಬಳಸುತ್ತಿದ್ದು, ಇದರಿಂದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಒಮನ್, ಕುವೈತ್, ಕತಾರ್ ದೇಶಗಳ ಮೇಲೆ ಇರಾನ್ ಪ್ರತೀಕಾರದ ದಾಳಿ ನಡೆಸುತ್ತಿದೆ.



