ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ಕಾರಣಕ್ಕಾಗಿ ಲಾರಿ ಮಾಲೀಕರು ಯಾಕೆ ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದಿಂದ ಅವರಿಗೇ ನಷ್ಟವಾಗುತ್ತದೆ. ಸುಮ್ಮನೆ ರಾಜಕೀಯಕ್ಕೆ ಒಳಗಾಗಬೇಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಲಾರಿ ಮುಷ್ಕರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರಶ್ನೆಗೆ ಉತ್ತರಿಸಿ, ‘ಮಾಲೀಕರು ಮುಷ್ಕರ ಮಾಡಿದರೆ ಅವರಿಗೇ ನಷ್ಟವಾಗುತ್ತದೆ. ಮುಷ್ಕರದಿಂದ ಆಗುವ ನಷ್ಟ ಭರಿಸಲು ಅವರಿಗೆ ಸಾಧ್ಯವಾಗುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ.
ಮುಷ್ಕರದಿಂದಾಗಿ ಲಾರಿ ಖರೀದಿ ಇಎಂಐ, ಬಡ್ಡಿ, ಚಾಲಕರ ಸಂಬಳ ಸೇರಿದಂತೆ ಮಾಲೀಕರಿಗೆ ಹಲವು ರೀತಿಯ ಹೊರೆಯಾಗಲಿದೆ. ರಾಜಕೀಯ ಕಾರಣಕ್ಕೆ ಮುಷ್ಕರ ಮಾಡದೆ ತಮ್ಮ ಬದುಕನ್ನು ನೋಡಿಕೊಳ್ಳಿ ಎಂದರು.