ಪ್ರತಿಭೆ ತೋರಿಸುವ ಅವಕಾಶ ಸಿಕ್ಕಾಗ ಹಿಂಜರಿಯಬೇಡಿ..

ಶುಕ್ರವಾರ, 16 ಸೆಪ್ಟೆಂಬರ್ 2022

ಮೇಷ
ಇತರರಿಗಿಂತ  ಸಮರ್ಥ ವಾಗಿ ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಿಮ್ಮಲ್ಲಿ ಅಂತಹ ಸಾಮರ್ಥ್ಯ ನಿಜವಾಗಿಯೂ ಇದೆ. ಕೌಟುಂಬಿಕ ಶಾಂತಿ.

ವೃಷಭ
ಎಲ್ಲರ ಮುಂದೆ ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆತರೆ ಹಿಂಜರಿಯಬೇಡಿ. ಧೈರ್ಯದಿಂದ ಮುನ್ನುಗ್ಗಿ. ಆರ್ಥಿಕ ಸ್ಥಿತಿ ಚೇತರಿಕೆ.

ಮಿಥುನ
ಇಂದು ಹೆಚ್ಚಿನ ವಿಷಯಗಳು ನಿಮಗೆ ಪೂರಕವಾಗಿಲ್ಲ. ಆದರೂ ಆಪ್ತರ ಸಂಗದಲ್ಲಿ ಖುಷಿ ಪಡುತ್ತಾ ಎಲ್ಲವನ್ನೂ ಮರೆಯುವಿರಿ.

ಕಟಕ
ನಿಮ್ಮ ಪರವಾಗಿ ಫಲಿತಾಂಶ ಬಾರದಾಗ ಬೇಗ ಹತಾಶರಾಗುವಿರಿ. ಆದರೆ ಸಹನೆಯಿಂದ ವರ್ತಿಸುವುದು ನಿಮಗೆ ಶ್ರೇಯಸ್ಕರ. ಕೆಲಸದಲ್ಲಿ ಉದಾಸೀನ ಬೇಡ.

ಸಿಂಹ
ನಿಮ್ಮ ಅಹಂನ್ನು ತೃಪ್ತಿಪಡಿಸಲು ಇಲ್ಲದ ಕಸರತ್ತು ಮಾಡಬೇಡಿ.ಅದರಿಂದ ಮುಖಭಂಗಕ್ಕೆ ಒಳಗಾಗುವ ಸಾಧ್ಯತೆ. ಸಹನೆ ಬೆಳೆಸಿಕೊಳ್ಳಿ.

ಕನ್ಯಾ
ಇಂದು ನಿಮ್ಮ ಗ್ರಹಗತಿ ಪೂರಕವಾಗಿದೆ.ವೃತ್ತಿಯಲ್ಲಿ ಯಶಸ್ಸು . ಮೆಚ್ಚುಗೆ ಪಡೆಯುವಿರಿ. ಕೌಟುಂಬಿಕ ಸಮಸ್ಯೆ, ಉದ್ವಿಗ್ನತೆ ನಿವಾರಣೆ ಆಗುವುದು.

ತುಲಾ
ಒಬ್ಬರ  ಕುರಿತಂತೆ ಕಹಿ ಭಾವನೆ ನಿಮ್ಮಲ್ಲಿ ತುಂಬಿಕೊಂಡಿದೆ. ಇದು ನಿಮ್ಮ ಸಂತೋಷವನ್ನೂ ಹಾಳು ಮಾಡುವುದು.ಸತ್‌ಚಿಂತನೆ ಒಳಿತು. ದ್ವೇಷ ತ್ಯಜಿಸಿರಿ.

ವೃಶ್ಚಿಕ
ಸಂಬಂಧದಲ್ಲಿ ಹೆಚ್ಚು ಹೊಣೆಗಾರಿಕೆಯಿಂದ ನಡಕೊಳ್ಳಿ. ವಿವೇಕ ರಹಿತ ವರ್ತನೆ ಬಂಧುತ್ವ ಹಾಳು ಮಾಡಬಹುದು. ಮಾತು ಹಿತವಾಗಿರಲಿ. ಅನವಶ್ಯ  ರೇಗದಿರಿ.

ಧನು
ಇಂದು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡ ಲಾರಿರಿ. ಹಾಗೆಂದು ಅನವಶ್ಯ ವಿಷಯಗಳಿಗೆ ದುಂದುವೆಚ್ಚ ಮಾಡದಿರಿ.

ಮಕರ
ಖರ್ಚು ಹೆಚ್ಚಳ. ಕಂಡದ್ದನ್ನೆಲ್ಲ ಖರೀದಿಸುವ ಹುಮ್ಮಸ್ಸು ತ್ಯಜಿಸಿ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಬೆಳೆಯಬಹುದು. ಕೌಟುಂಬಿಕ ಕಲಹ.

ಕುಂಭ
ಸಂತೋಷ ಆಚರಿಸಬೇಕಾದ ಸಮಯವಿದು. ಮಹತ್ವದ ಸಾಧನೆ ನಿಮ್ಮದಾಗಲಿದೆ. ಕುಟುಂಬಸ್ಥರ ಸಹಕಾರ. ಆರೋಗ್ಯ ವೃದ್ಧಿ.

ಮೀನ
ಇಂದು ನಿರಾಶೆಯ ದಿನ. ಯಾವುದೋ  ವಿಷಯದಲ್ಲಿ ಕುಟುಂಬಸ್ಥರ ಬೆಂಬಲ ಸಿಗುವುದಿಲ್ಲ. ಬಂಧುಗಳ ಜತೆ ವಿರಸ ಉಂಟಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!