ನೀವು ಭಯೋತ್ಪಾದನೆಯ ಬೆಂಬಲಿಗರೇ? ಯಾಸಿನ್ ಮಲಿಕ್ ಶಿಕ್ಷೆ ತೀರ್ಪು ಟೀಕಿಸಿದ ಒಐಸಿಗೆ ಭಾರತ ತೀಕ್ಷ್ಣ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಶ್ಮೀರಿ ಭಯೋತ್ಪಾದಕ ಯಾಸಿನ್ ಮಲಿಕ್​​​ಗೆ ದೆಹಲಿ ವಿಶೇಷ ನ್ಯಾಯಾಲಯ​ ವಿಧಿಸಿದ ಜೀವಾವಧಿ ಶಿಕ್ಷೆ ತೀರ್ಪಿನ ಕುರಿತು ಟೀಕೆಗಳನ್ನು ಮಾಡಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಗೆ ಭಾರತ ಮುಖಕ್ಕೆ ಹೊಡೆದಂತೆ ತಿರುಗೇಟು ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಯಾಸಿನ್ ಮಲಿಕ್ ಮುಸ್ಲಿಂ ‌ಎಂಬ ಕಾರಣಕ್ಕೆ ಆತನನ್ನು ಸಮರ್ಥಿಸಿಕೊಳ್ಳುತ್ತೀರಿ ಎಂದಾದಲ್ಲಿ ನೀವೂ ಸಹ ಭಯೋತ್ಪಾದಕ ಚಟುವಟಿಕೆಗಳ ಪರೋಕ್ಷ ಬೆಂಬಲಿಗರು ಎಂದಾಗುತ್ತದೆ. ಜಗತ್ತು ಸಹಿಷ್ಣುತೆಯನ್ನು ಬಯಸುತ್ತಿದೆ. ಇಂತಹ ಪ್ರಕರಣಗಳನ್ನು ಎಂದೆಂದಿಗೂ ಸಮರ್ಥಿಸಿಕೊಳ್ಳಲು ಹೋಗಬೇಡಿ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಲಿಕ್‌ ಮಾಡಿದ ಕೃತ್ಯ ಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆತನೊಬ್ಬ ದೇಶ ವಿರೋಧಿ. ಆತ ನಡೆಸಿದ ಭಯೋತ್ಪಾದನೆ ಕೃತ್ಯಗಳು ಸೇರಿದಂತೆ ದೇಶದ ವಿರುದ್ಧ ಸಂಚು ರೂಪಿಸಿರುವ ಆರೋಪಗಳು ಸಾಬೀತಾಗಿದೆ. ಈ ಕುರಿತ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಯೇ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈ ವಿಚಾರವಾಗಿ ಒಐಸಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅರಿಂದಮ್ ಬಾಗ್ಚಿ ತಿರುಗೇಟು ನೀಡಿದ್ದಾರೆ.
ಯಾಸಿನ್ ಮಲಿಕ್​ ಅಪರಾಧಿ ಎಂದು ದೆಹಲಿ ವಿಶೇಷ ನ್ಯಾಯಾಲಯ ಇತ್ತೀಚೆಗೆ ಘೋಷಿಸಿತ್ತು. ಈ ಪ್ರಕರಣದಲ್ಲಿ ಮಲಿಕ್ ತಪ್ಪೊಪ್ಪಿಕೊಂಡಿದ್ದು, ಕಳೆದ ವಾರ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಯಾಸಿನ್‌ ಗೆ ಶಿಕ್ಷೆ ವಿಧಿಸಿದ ವಿಚಾರವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆಯು, ಮಲಿಕ್ ಗೆ ಶಿಕ್ಷೆ ವಿಧಿಸಿದ್ದು ಅಮಾನವೀಯ ಘಟನೆ. ಕಾಶ್ಮೀರಿ ಮುಸ್ಲೀಂರ ಧ್ವನಿ ಹತ್ತಿಕ್ಕುವ ವ್ಯವಸ್ಥಿತ ಕುತಂತ್ರ. ಇದೊಂದು ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕುವ ಕೃತ್ಯವಾಗಿದೆ ಎಂದು ಟೀಕಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!