September 14, 2026
Monday, September 14, 2026
spot_img

Don’t Make Mom Angry | ಸೈಲೆಂಟ್ ಆಗಿ ಕೆಲಸ ಮುಗಿಸಿ, ಅಮ್ಮನ ‘ಸ್ವೀಟ್’ ಬೈಗುಳದಿಂದ ಎಸ್ಕೇಪ್ ಆಗಿ!

ಲೈಫ್‌ನಲ್ಲಿ ಎಷ್ಟೇ ದೊಡ್ಡ ಕಷ್ಟ ಬರಲಿ, ಎಂತದ್ದೇ ಟೆನ್ಷನ್ ಇರಲಿ… ಅಮ್ಮ ಬಂದು “ಏನ್ ಮಾಡ್ತಾ ಇದ್ಯಾ!” ಅಂತ ಗಂಟಲು ಕಿರುಚಿಕೊಳ್ಳೋಕು ಮುಂಚೆನೇ ಮನೆಯಲ್ಲಿರೋ ಕೆಲಸನೆಲ್ಲ ಗುಡಿಸಿ, ಸಾರಿಸಿ, ಪಟಾಪಟ್ ಅಂತ ಮುಗಿಸಿಟ್ಟುಬಿಡಿ. ಅಮ್ಮ ಬಂದಾಗ ಮನೆ ಚಕಚಕ ಅಂತ ಹೊಳೆಯುತ್ತಿದ್ರೆ, ಆಹಾ! ಅಲ್ಲಿಗೆ ನಿಮ್ಮ ಅರ್ಧ ಕಷ್ಟ ಮಾಯ. ಬೈಯೋಕೆ ಬಂದ ಅಮ್ಮ ಕೂಡ ಶಾಕ್ ಆಗಿ, ಮುಖದಲ್ಲಿ ಫುಲ್ ನಗೆ ಚೆಲ್ಲಿ “ನನ್ ಮಗ/ಮಗಳು ಅಂದ್ರೆ ಹೀಗಿರ್ಬೇಕು” ಅಂತ ಮೆಚ್ಚುಗೆಯ ಮಾತಾಡ್ತಾರೆ.

ನಮ್ಮ ಲೈಫ್‌ನಲ್ಲಿ ಎಷ್ಟೋ ಟೆನ್ಷನ್ ಇರುತ್ತೆ. ಆದ್ರೆ ಮನೆಯಲ್ಲಿ ಅಮ್ಮನ ಕೈಯಲ್ಲಿ ಬೈಗುಳ ತಿಂದ್ರೆ ಆ ಪ್ರೆಶರ್ ಡಬಲ್ ಆಗುತ್ತೆ. ಅದೇ ನಾವೇ ಮುಂದೆ ನಿಂತು, ಅಮ್ಮ ಕೇಳೋಕು ಮುಂಚೆನೇ ಪ್ರತಿಯೊಂದು ಕೆಲಸವನ್ನೂ ನೀಟಾಗಿ ಮುಗಿಸಿಟ್ಟರೆ, ಮನೆಯಲ್ಲಿ ಅಮ್ಮನ ಪ್ರೀತಿಯ ಜೊತೆಗೆ ಒಂಥರಾ ಸಕ್ಕತ್ ಪಾಸಿಟಿವ್ ವೈಬ್ಸ್ ಸಿಗುತ್ತೆ. ಅಮ್ಮ ಮಾಡೋ ಬಿಸಿ ಬಿಸಿ ಕಾಫಿ ಅಥವಾ ತಿಂಡಿ ಜೊತೆ ಆ ದಿನದ ಸ್ಟ್ರೆಸ್ ಎಲ್ಲಾ ಗಾಳಿಯಲ್ಲಿ ತೇಲಿ ಹೋಗುತ್ತೆ.

ಮನೆಯ ಸಣ್ಣ ಪುಟ್ಟ ಕೆಲಸ ಮುಗಿಸೋದು ದೊಡ್ಡ ವಿಷ್ಯಾನೇ ಅಲ್ಲ. ಆದ್ರೆ ಅಮ್ಮ ಕೂಗಾಡೋಕಿಂತ ಮುಂಚೆ ಅದನ್ನ ಮುಗಿಸೋದಿದೆಯಲ್ಲ, ಅದು ನಿಜವಾದ ಜಾಣತನ! ಹೀಗೆ ಮಾಡೋದ್ರಿಂದ ನಮಗೂ ಒಂದು ಗೆಲುವಿನ ಫೀಲ್ ಸಿಗುತ್ತೆ, ಅಮ್ಮನ ಮುಖದಲ್ಲೂ ಖುಷಿ ಕಾಣುತ್ತೆ. ಇವತ್ತಿಂದಾನೇ ಈ ಟ್ರಿಕ್ ಫಾಲೋ ಮಾಡಿ, ಅಮ್ಮನ ಪ್ರೀತಿ ಮತ್ತು ಮನೆಯಲ್ಲಿ ಸಿಗೋ ನೆಮ್ಮದಿನ ಫುಲ್ ಎಂಜಾಯ್ ಮಾಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !