ತೂಕ ಇಳಿಕೆ ಮಾಡಬೇಕು ಅಂತಿದ್ರೆ ಬೆಳಗ್ಗೆ ಈ ಪ್ರೋಟೀನ್ ಕಾಂಬೋ ಬ್ರೇಕ್‌ಫಾಸ್ಟ್ ತಯಾರು ಮಾಡಿ ಹೇಗೆ ನೋಡಿ..
ವೆಜಿಟೇಬಲ್ ಓಟ್ಸ್
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಬೀನ್ಸ್, ಬಟಾಣಿ, ಸ್ವೀಟ್ ಕಾರ್ನ್, ಕೋಸು,ಪನೀರ್ ಹಾಕಿ ಸಾಟೆ ಮಾಡಿ
ನಂತರ ಉಪ್ಪು, ಪೆಪ್ಪರ್, ಸಾಂಬಾರ್ ಪುಡಿ ಹಾಗೂ ಖಾರದಪುಡಿ ಹಾಕಿ
ನಂತರ ಇದಕ್ಕೆ ಓಟ್ಸ್ ಹಾಕಿ, ನಂತರ ನೀರು ಹಾಕಿ ಮಿಕ್ಸ್ ಮಾಡಿ
ಓಟ್ಸ್ ಬೆಂದ ನಂತರ ಕೊತ್ತಂಬರಿ ಹಾಕಿ
ವೆಜಿಟೇಬಲ್ ಆಮ್ಲೆಟ್
ಬೌಲ್‌ಗೆ ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಂ, ಕ್ಯಾರೆಟ್, ಬೀನ್ಸ್, ಬಟಾಣಿ, ಸ್ವೀಟ್ ಕಾರ್ನ್, ಕೋಸು ಹಾಕಿ
ನಂತರ ಉಪ್ಪು, ಪೆಪ್ಪರ್, ಹಸಿಮೆಣಸು ಹಾಕಿ
ನಂತರ ಮೊಟ್ಟೆ ಹಾಕಿ ಚೆನ್ನಾಗಿ ಬೀಟ್ ಮಾಡಿ
ನಂತರ ಕಾದ ಹೆಂಚಿಗೆ ಎಣ್ಣೆ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಮೊಟ್ಟೆ ಮಿಶ್ರಣ ಹಾಕಿ ಆಮ್ಲೆಟ್ ತಿನ್ನಿ
ಈ ತಿಂಡಿ ಜೊತೆಗೆ ಸೌತೆಕಾಯಿ, ಕ್ಯಾರೆಟ್, ಮೂಲಂಗಿ ತಿನ್ನಬಹುದು