ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ಹೆಚ್ಚಾಗಿದ್ದ ಹ್ಯೂಮನ್ ಮೆಟಾನ್ಯುಮೋ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲಿಯೂ ಎರಡು ಪ್ರಕರಣಗಳು ನಮ್ಮ ಬೆಂಗಳೂರಿನಲ್ಲಿ ದಾಖಲಾಗಿವೆ.
ದೇಶದಲ್ಲಿ ಒಟ್ಟಾರೆ ಮೂವರು ಮಕ್ಕಳಿಗೆ ಸೋಂಕು ಬಾಧಿಸಿದೆ. ಮೂರು ತಿಂಗಳು, ಎಂಟು ತಿಂಗಳು ಹಾಗೂ ಎರಡು ವರ್ಷದ ಮಗುವಿಗೆ ಸೋಂಕು ಬಾಧಿಸಿದೆ.
ಈ ಬಗ್ಗೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್ ಗೋಯಲ್ ಮಾಹಿತಿ ನೀಡಿದ್ದಾರೆ.
ವೈರಸ್ ಹರಡುವಿಕೆ ಬಗ್ಗೆ ಹೆಚ್ಚು ಆತಂಕ ಪಡಬೇಡಿ. ಇದು ಇತರೆ ಉಸಿರಾಟದ ಸಮಸ್ಯೆಗಳನ್ನು ಬಾಧಿಸುವ ವೈರಸ್ ರೀತಿ ಮತ್ತೊಂದು ವೈರಸ್ ಅಷ್ಟೆ. ಮಾಮೂಲಿಯಾದ ಶೀತ, ಉಸಿರಾಟದ ತೊಂದರೆ ಹಾಗೂ ಫ್ಲೂ ಬಾಧಿಸುತ್ತದೆ. ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ಸೋಂಕು ಬಾಧಿಸುವ ಸಾಧ್ಯತೆ ಇದೆ.
ನಮ್ಮ ದೇಶ ವೈರಸ್ ಔಟ್‌ಬ್ರೇಕ್‌ಗೆ ಸಿದ್ಧವಾಗಿದೆ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸಹಾಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗ ಚಳಿಗಾಲವಾದ್ದರಿಂದ ಶೀತದ ಸಮಸ್ಯೆ ಬಾಧಿಸುತ್ತದೆ. ಬೇಸಿಕ್ ಹೈಜಿನ್ ಹಾಗೂ ಮುನ್ನೆಚ್ಚರಿಕೆ ತೆಗೆದುಕೊಂಡರೆ ವೈರಸ್ ಬಾಧಿಸುವುದಿಲ್ಲ. ಇದನ್ನು ಜನರು ಫಾಲೋ ಮಾಡಬೇಕು ಎಂದಿದ್ದಾರೆ.