ಪ್ರಜಾಪ್ರಭುತ್ವದ ದೇಗುಲ ಸಂಸತ್ ಕಾರ್ಯವೈಖರಿಗೆ ರಾಜಕೀಯಗೊಳಿಸಬೇಡಿ : ಸಚಿವ ಪ್ರಹ್ಲಾದ್ ಜೋಶಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಸಂಸತ್​​ನ ಕೆಲಸವನ್ನು ನೀವು ರಾಜಕೀಯಗೊಳಿಸುತ್ತಿರುವುದು, ಯಾವುದೇ ವಿವಾದವಿಲ್ಲದಿರುವಾಗ, ನೀವು ಅನಗತ್ಯವಾಗಿ ಅದನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಸೋನಿಯಾ ಗಾಂಧಿ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ದೇಗುಲ ಸಂಸತ್ ಕಾರ್ಯವೈಖರಿಗೆ ರಾಜಕೀಯಗೊಳಿಸಬೇಡಿ. ಅನಗತ್ಯ ವಿವಾದಗಳನ್ನು ಸೃಷ್ಟಿಸಲು ನೀವು ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ .

ಬಹುಶ ನೀವು ಸಾಂಪ್ರದಾಯಗಳಿಗೆ ಗಮನ ಕೊಡುವುದಿಲ್ಲ.ಅಧಿವೇಶನ ಕರೆಯುವ ಮೊದಲು ರಾಜಕೀಯ ಪಕ್ಷಗಳ ಜೊತೆ ಚರ್ಚಿಸುವುದಿಲ್ಲ.ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದರು.

ರಾಜಕೀಯ ಪಕ್ಷಗಳನ್ನು ಎಂದಿಗೂ ಮುಂಚಿತವಾಗಿ ಸಮಾಲೋಚಿಸುವುದಿಲ್ಲ. ಪ್ರತಿಯೊಂದು ವಿಷಯದಲ್ಲೂ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ ನೀವು ಹೇಳಿದ ವಿಷಯಗಳ ಬಗ್ಗೆ ಈಗಾಗಲೇ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ಚರ್ಚೆಯಲ್ಲಿ ಚರ್ಚಿಸಿ ಆಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!