ತುಂಬಾ ದಿನ ಆಯ್ತಲ್ವಾ ಸಿನಿಮಾಗೆ ಹೋಗಿ ಬರೋಣ್ವಾ?
– ಅಯ್ಯೋ ನಂಗೂ ಇಷ್ಟ ಆದ್ರೆ ಏನ್ ಮಾಡ್ಲಿ ನಂಗ್ ಟೈಮೇ ಇಲ್ಲ!
ಏನೋ ಮಚಾ ಎಷ್ಟೊಂದ್ ದಿನ ಆಯ್ತು ಪತ್ತೆನೇ ಇಲ್ಲ, ಒಂದ್ ಫೋನ್ ಮಾಡಕ್ಕೂ ಆಗ್ಲಿಲ್ವಾ? ಮಾಡದ್ ಬಿಡು, ನಾನ್ ಮಾಡಿದ್ರೆ ಆನ್ಸರ್ ಮಾಡ್ಬೇಕು ತಾನೆ?
– ಮಗಾ ಬೇಜಾರಾಗ್ಬೇಡ್ವೋ, ಇತ್ತೀಚೆಗೆ ಜಾಸ್ತಿ ಕೆಲಸ, ಫೋನ್ ನೋಡಕ್ಕೂ ಟೈಮೇ ಇಲ್ಲ!
ನಮ್ ನೆಂಟ್ರು ಮನೆಲಿ ಫಂಕ್ಷನ್ ಕಣೆ, ಸಂಜೆ ಹೋಗ್ಬರಣ್ವಾ?
– ಅಮ್ಮಾ ಸುಮ್ನೆ ಎಲ್ಲಾದ್ಕೂ ನನ್ಯಾಕ್ ಕರ್ಕೊಂಡ್ ಹೋಗ್ತ್ಯ, ಬೇಕಾದ್ರೆ ನೀನ್ ಹೋಗ್ಬಾ ನಂಗ್ ಟೈಮ್ ಇಲ್ಲ!
ಜೀವನದಲ್ಲಿ ಎಷ್ಟು ಬಾರಿ ಎಷ್ಟು ಜನಕ್ಕೆ ಈ ರೀತಿ ಟೈಮ್ ಇಲ್ಲ ಅಂತ ಹೇಳಿದಿರಾ? ಅಸಲಿಗೆ ಟೈಮ್ ಇಲ್ಲ ಅನ್ನೋ ಕಾನ್ಸೆಪ್ಟೇ ಇಲ್ಲ. 24 ಗಂಟೆ, ದಿನದಲ್ಲಿ 24 ಗಂಟೆ ಇದೆ. ಇಷ್ಟಿದ್ರೂ ಟೈಮ್ ಇಲ್ಲ ಅಂದ್ರೆ ಹೇಗೆ? ಇದರರ್ಥ ನೀವು ನಿಮ್ಮ ದಿನವನ್ನು ಸರಿಯಾಗಿ ಪ್ಲಾನ್ ಮಾಡಿಲ್ಲ ಅಂತ.
ವಾರಕ್ಕೊಮ್ಮೆ ಸ್ನೇಹಿತರಿಗೆ ಫೋನ್ ಮಾಡೋಕೆ ಟೈಮ್ ಇಲ್ಲ ಅಂದ್ರೆ ಫೋನ್ ಮಾಡೋಕೆ ಇಷ್ಟ ಇಲ್ಲ ಅಂತ ಅರ್ಥ. ಗರ್ಲ್‌ಫ್ರೆಂಡ್ ಜೊತೆ ಸಿನಿಮಾಗೆ ಹೋಗೋಕೆ ಟೈಮ್ ಇಲ್ಲ ಅಂದ್ರೆ ನೀವಾಗ್ಲೇ ಸಿನಿಮಾ ನೋಡಾಗಿದೆ ಅಂತ ಅರ್ಥ. ಅಮ್ಮ ನೆಂಟ್ರು ಮನೆಗೆ ಕರ್ದಾಗ ಹೋಗೋಕಾಗೋದಿಲ್ಲ ಅಂದ್ರೆ ನಿಮ್ಗೆ ಇಂಟ್ರೆಸ್ಟ್ ಇಲ್ಲ ಅಂತ ಅರ್ಥ.
ಇನ್ನೊಂದ್ ವಿಷ್ಯ, ಯಾರಿಗಾದ್ರೂ ‘ಟೈಮ್’ ಕೊಡ್ಬೇಕು ಅಂತ ಡಿಸೈಡ್ ಮಾಡಿದ್ರೆ ಎಷ್ಟೇ ಬ್ಯುಸಿಯಾಗಿರಿ ಅವರಿಗೆ ಅಂತ ಟೈಮ್ ಮಾಡ್ಕೋತಿರಾ ಅಲ್ವಾ? ಇದನ್ನು ಟೈಮ್ ಮಾಡ್ಕೊಳದು ಅನ್ನೋಕಿಂತ ನೀವು ನಿಮ್ಮ ದಿನವನ್ನು ಪ್ಲಾನ್ ಮಾಡ್ಕೊಂಡಿದಿರಿ ಅಂತರ್ಥ ಅಲ್ವಾ?
ದಿನದ 24 ಗಂಟೆಯನ್ನು ನಿಮ್ಮ ಆರೋಗ್ಯಕ್ಕೆ, ಕೆಲಸಕ್ಕೆ, ಸಂಬಂಧಗಳಿಗೆ ಜೊತೆಗೆ ನಿಮಗಾಗಿ ಅಂತ ಡಿವೈಡ್ ಮಾಡ್ಕೊಳಿ. ಆಗ ನೋಡಿ ಎಲ್ಲಾದ್ಕೂ ನಿಮ್ಗೆ ‘ಟೈಮ್’ ಸಿಗತ್ತೆ! ಅಲ್ವಾ??