HEALTH | ಶೀತ ಆಗತ್ತೆ ಅಂತ ಸೀತಾಫಲ ತಿನ್ನೋದು ಬಿಡ್ಬೇಡಿ, ಈ ಹಣ್ಣಲ್ಲಿ ಏನೆಲ್ಲಾ ಇದೆ ಗೊತ್ತಾ?

ಈಗ ಮಾರುಕಟ್ಟೆಯಲ್ಲಿ ಇತರ ಬಗೆಯ ಹಣ್ಣುಗಳ ಜೊತೆಗೆ ಸೀತಾಫಲ ಹಣ್ಣುಗಳು ಕೂಡ ಹೇರಳವಾಗಿ ಕಂಡು ಬರುತ್ತಿದೆ. ಯಾಕೆಂದ್ರೆ ಸೀತಾ ಫಲ ಹಣ್ಣುಗಳ ಸೀಸನ್ ಶುರುವಾಗಿ ಬಿಟ್ಟಿದೆ. ಸಾಮಾನ್ಯವಾಗಿ ಮಳೆಗಾಲ ಮುಗಿದು, ಚಳಿಗಾಲ ಶುರುವಾಗುವ ಸಮಯದಲ್ಲಿ, ಈ ಹಣ್ಣು ಹೆಚ್ಚಾಗಿ ಎಲ್ಲಾ ಕಡೆ ಕಂಡು ಬರುತ್ತದೆ. ಇದನ್ನು ಸೀಸನಲ್ ಹಣ್ಣು ಎಂದು ಕೂಡ ಹೇಳಬಹುದು. ಏಕೆಂದರೆ ಎಲ್ಲಾ ಸಮಯದಲ್ಲೂ ಕೂಡ ಈ ಹಣ್ಣು ಸೇವಿಸಲು ಸಿಗು ವುದಿಲ್ಲ. ಹೀಗಾಗಿ ಈ ಹಣ್ಣು ಸಿಕ್ಕಿದ ಸಮಯದಲ್ಲಿ, ಮಿಸ್ ಮಾಡದೇ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು.

ನಮ್ಮ ಹಣ್ಣುಗಳ ಆರೋಗ್ಯಕ್ಕೆ, ಸೀತಾಫಲ ಹಣ್ಣುಗಳು ಬಹಳ ಒಳ್ಳೆ ಯದು. ಇದಕ್ಕೆ ಮುಖ್ಯ ಕಾರಣ, ಈ ಹಣ್ಣಿನಲ್ಲಿ ಕಂಡು ಬರುವ ವಿಟ ಮಿನ್ ಎ ಹಾಗೂ ವಿಟಮಿನ್ ಸಿ ಅಂಶಗಳು, ಕಣ್ಣುಗಳಿಗೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಈ ಹಣ್ಣಿನಲ್ಲಿ ನಾರಿನಾಂಶದ ಪ್ರಮಾಣ ಅಪಾರ ಪ್ರಮಾಣದಲ್ಲಿ ಕಂಡು ಬರುವುದರಿಂದ, ಅಜೀರ್ಣ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡಿ, ಜೀರ್ಣಾಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.

ಸೀತಾಫಲ ಹಣ್ಣಿನಲ್ಲಿ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ,ಹೃದಯದ ಆರೋಗ್ಯಕ್ಕೆ ಇದರಿಂದ ತುಂಬಾನೇ ಲಾಭವಿದೆ.

ಅಷ್ಟೇ ಅಲ್ಲದೆ, ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಯಥೇಚ್ಛ ವಾಗಿ ಕಂಡು ಬರುವುದರಿಂದ, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸಲು ನೆರವಿಗೆ ಬರುತ್ತದೆ.

ಸೀತಾಫಲ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟ ಮಿನ್ ಸಿ ಹಾಗೂ ಪ್ರಬಲ ಆಂಟಿ ಆಕ್ಸಿಡೆಂಟುಗಳಿದ್ದು ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕಕಣಗಳಿಂದ ರಕ್ಷಿಸುವುದು ಮಾತ್ರವಲ್ಲದೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನೂ ಕೂಡ ಹೆಚ್ಚಿಸುತ್ತದೆ.

ವಿಟಮಿನ್ ಸಿ ಅಂಶ ಹೆಚ್ಚಾಗಿ ಸಿಗುವ ಸೀತಾಫಲ ಹಣ್ಣನ್ನು ನಿಯಮಿತ ವಾಗಿ ಸೇವನೆ, ಮಾಡುವುದರಿಂದ, ಮುಖದ ಸೌಂದರ್ಯವು ಕೂಡ ಹೆಚ್ಚಾ ಗುತ್ತದೆ. ಪ್ರಮುಖವಾಗಿ ಸಣ್ಣ ವಯಸ್ಸಿನಲ್ಲಿ ಮುಖದ ಮೇಲೆ ಕಂಡು ಬರುವ ನೆರಿಗೆ, ಕಲೆಗಳ ಸಮಸ್ಯೆಗಳು, ನಿಧಾನಕ್ಕೆ ದೂರವಾಗುತ್ತವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!