Tuesday, March 28, 2023

Latest Posts

ಶೀತ, ಕೆಮ್ಮು, ಜ್ವರಕ್ಕೆ ಆಂಟಿಬಯೋಟಿಕ್ಸ್ ತೆಗೆದುಕೊಳ್ಳಬೇಡಿ: ಐಎಂಎ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೀಗ ಹವಾಮಾನ ಬದಲಾವಣೆಯಾಗಿದ್ದು, ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ. ಈ ಬದಲಾದ ತಾಪಮಾನಕ್ಕೆ ನೆಗಡಿ, ಕೆಮ್ಮು, ಶೀತ, ಜ್ವರ ಬರುವುದು ಸಾಮಾನ್ಯವಾಗಿದೆ. ಇದಕ್ಕೆ ಆಸ್ಪತ್ರೆಗೆ ಹೋಗದೆ ಮೆಡಿಕಲ್ಸ್‌ಗೆ ತೆರಳಿ ಆಂಟಿಬಯೋಟಿಕ್ಸ್ ಪಡೆದು ಕುಡಿಯುವುದು ಕೂಡ ಸಾಮಾನ್ಯವಾಗಿದೆ. ಆದರೆ ಇದನ್ನು ಮಾಡಬೇಡಿ ಎಂದು ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಸಲಹೆ ನೀಡಿದ್ದಾರೆ.

ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್‌ಗಾಗಿ ಐಎಮ್‌ಎ ಸ್ಥಾಯಿ ಸಮಿತಿಯು ಜನರು ಅನುಸರಿಸಲು ಮಾರ್ಗಸೂಚಿಗಳ ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಂಟಿಬಯೋಟಿಕ್ಸ್ ಸೇವಿಸದಂತೆ ಹೇಳಲಾಗಿದೆ. ದೇಹದಲ್ಲಿ ಈಗಾಗಲೇ ಉತ್ತಮ ಬ್ಯಾಕ್ಟೀರಿಯಾಗಳು ಇರುತ್ತವೆ. ಈ ಬ್ಯಾಕ್ಟೀರಿಯಾಗಳು ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿರುತ್ತವೆ, ಆದರೆ ಹೆಚ್ಚು ಆಂಟಿಬಯೋಟಿಕ್ಸ್ ಸೇವನೆಯಿಂದಾಗಿ ಉತ್ತಮ ಬ್ಯಾಕ್ಟೀರಿಯಾಗಳ ಉಪಸ್ಥಿತಿಯನ್ನು ಕ್ರಮೇಣ ಕೊಲ್ಲುತ್ತವೆ ಎಂದಿದ್ದಾರೆ.

ರಾಜ್ಯಕ್ಕೆ ಎಚ್3ಎನ್2 ಕಾಲಿಟ್ಟಿದ್ದು, ಕೋವಿಡ್ ಸಮಯದಲ್ಲಿ ಎಷ್ಟು ಮುನ್ನೆಚ್ಚರಿಕೆ ಪಾಲಿಸುತ್ತಿದ್ದಿರೋ ಅಷ್ಟೇ ಮುನ್ನೆಚ್ಚರಿಕೆ ಈಗಲೂ ಇರಲಿ. ಐದು ದಿನಕ್ಕಿಂತ ಹೆಚ್ಚು ಕಾಲ ಸೋಂಕಿದ್ದರೆ ವೈದ್ಯರನ್ನು ಭೇಟಿ ಮಾಡಬೇಕು ಎಂದು ಐಎಂಎ ಸಲಹೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!