ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಮ್ಯಾಕ್ಸ್’ (Max) ಸಿನಿಮಾ ಗೆದ್ದ ಖುಷಿಯಲ್ಲಿ ನಟ ಸುದೀಪ್ ಇದ್ದಾರೆ. ಬೆಂಗಳೂರಿನ ನರ್ತಕಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆ ‘ಮ್ಯಾಕ್ಸ್’ ಸಿನಿಮಾ ವೀಕ್ಷಿಸಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಸ್ಟಾರ್ಸ್ ಫ್ಯಾನ್ಸ್ ವಾರ್ ಜಾಸ್ತಿ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಬೇರೇ ಹೀರೋಗಳು ನನ್ನ ಸಹಕಲಾವಿದರು ಅವರಿಗೆ ಟಾಂಟ್ ಕೊಡೋದು ಮಾಡಬೇಡಿ ಎಂದು ಹೇಳಿದ್ದಾರೆ.
ನಾವು ಹೇಳೋದ್ರಿಂದ ಅವರು ಕೇಳೋ ಹಾಗೆ ಇದಿದ್ರೆ, ವಾರ್ ಅಂತಾ ನೀವೇನು ಹೇಳ್ತಿದ್ದೀರಾ, ಅದು ಯಾರು ಮಾಡ್ತಿದಾರೆ ಅಂತ ಗೊತ್ತಾಗಲ್ಲ. ನಮ್ಮ ಫ್ಯಾನ್ಸ್‌ಗಳು ಮಾಡ್ತಿದ್ದಾರಾ? ಬೇರೆ ಅವರ ಫ್ಯಾನ್ಸ್ ಮಾಡ್ತಿದ್ದಾರೋ ಗೊತ್ತಿಲ್ಲ. ಯಾರ್ ಯಾರೋ ತಂದು ಹಾಕೋಕೆ ಮಾಡಬಹುದು. ಅದು ನಮಗೆ ಗೊತ್ತಾಗಲ್ಲ ಎಂದಿದ್ದಾರೆ.
ಸಿನಿಮಾ ಮಾಡಬೇಕು ಅನ್ನೋದು ಏಕಾಗ್ರತೆ ಇದೆ. ಪ್ರತಿಯೊಬ್ಬ ಕಲಾವಿದರಿಗೂ ಅದೇ ಇರೋದು. ನಾನು ನನ್ನ ಅಭಿಮಾನಿಗಳಿಗೆ ಹೇಳುತ್ತೇನೆ. ಬೇರೇ ಹೀರೋಗಳು ನನ್ನ ಸಹ ಕಲಾವಿದರು ಅವರೆಲ್ಲಾ ಹಾಗಾಗಿ ಅವರ ಬಗ್ಗೆ ಟಾಂಟ್ ಕೊಡೋದು ಮಾಡಬೇಡಿ. ನಮ್ಮ ಸಿನಿಮಾ ಹೊಗಳುವ ಭರದಲ್ಲಿ ಬೇರೇ ಅವರ ಜೊತೆ ಕಂಪೇರ್ ಮಾಡಿ ಮಾತನಾಡೋದು ಬೇಡ ಎಂದು ಫ್ಯಾನ್ಸ್‌ಗೆ ಹೇಳುತ್ತೇನೆ. ಮಿಕ್ಕಿದ ಫ್ಯಾನ್ಸ್‌ಗೆ ಅವರವರ ಹೀರೋಗಳು ನೋಡ್ಕೊಬೇಕು ಎಂದು ಹೇಳಿದರು.