ಹೊಸ ವರ್ಷಾಚರಣೆ ಸಂಭ್ರಮ: ಜಗತ್ತಿನಲ್ಲಿ ಎಲ್ಲರಿಗಿಂತ ಮೊದಲು ಸ್ವಾಗತಿಸಿದವರು ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ಕ್ಯಾಲೆಂಡರ್ ಹೊಸ ವರ್ಷದ ಸ್ವಾಗತಕ್ಕೆ ಎಲ್ಲೆಡೆ ಸಜ್ಜಾಗುತ್ತಿದ್ದು, ಭಾರತದಲ್ಲಿ ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಇದೆ. ದೇಶಾದ್ಯಂತ ನ್ಯೂ ಇಯರ್ ಸ್ವಾಗತಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷದ ಸ್ವಾಗತಕ್ಕೆ ದೇಶ ರೆಡಿಯಾಗಿದೆ.

ಇದರ ನಡುವೆ ಇಡೀ ವಿಶ್ವದಲ್ಲಿ ಮೊದಲು ಹೊಸ ವರ್ಷವನ್ನು ಸ್ವಾಗತಿಸಿದ ಪ್ರದೇಶ ಕಿರಿಬಾತಿ ದ್ವೀಪ ರಾಷ್ಟ್ರ. ತನ್ನ ಕಕ್ಷೆಯ ಸುತ್ತ ಭೂಮಿ ತಿರುಗುವುದರಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಹೊಸ ವರ್ಷಾಚರಣೆ ಸಮಯ ಕೂಡ ವಿಭಿನ್ನವಾಗಿಯೇ ಇದೆ. ಹೀಗಾಗಿ ವಿಶ್ವದಲ್ಲೇ ಹೊಸ ವರ್ಷ ಮೊದಲು ಸ್ವಾಗತಿಸುವ ಪ್ರದೇಶವೆಂದರೆ ಕಿರಿಬಾತಿ.

ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಕ್ರಿಸ್ಮಸ್ ದ್ವೀಪ ಎಂದೂ ಕರೆಯಲ್ಪಡುವ ಕಿರಿಬಾತಿ ದ್ವೀಪದಲ್ಲಿ ಜನವರಿ 1, 2025ರ ಮುಂಜಾನೆಯು ಡಿಸೆಂಬರ್ 31, 2024ರಂದು ಪೂರ್ವ ಸಮಯ (ಇಟಿ) (Eastern Time -ET)ಯ ಬೆಳಿಗ್ಗೆ 5.00 ಗಂಟೆಗೇ ಆರಂಭವಾಗಿದೆ.

ಕಿರಿಬಾತಿಯಲ್ಲಿನ ಈ ಮಹತ್ವದ ಸಮಯವು ಜಾಗತಿಕ ಹೊಸ ವರ್ಷದ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ವಿಶ್ವದ ಯಾವುದೇ ರಾಷ್ಟ್ರಗಳಿಗಿಂತ ಮುನ್ನವೇ ಕಿರಿಬಾತಿಯಲ್ಲಿ ಹೊಸ ವರ್ಷ ಆರಂಭವಾಗುವುದು ವಿಶೇಷ.

ಕಿರಿಬಾತಿಯಲ್ಲಿ ಗಡಿಯಾರವು ಮಧ್ಯರಾತ್ರಿಯನ್ನು ಮುಟ್ಟಿದಾಗ ಸ್ಥಳೀಯರು ಹೊಸ ವರ್ಷಾಚರಣೆಯನ್ನು ಆರಂಭಿಸಿದ್ದಾರೆ. ಸಣ್ಣ ದ್ವೀಪದಾದ್ಯಂತ ಉತ್ಸಾಹ ಮತ್ತು ಆಚರಣೆಯ ವಾತಾವರಣ ಸೃಷ್ಟಿಯಾಗಿದೆ.

ಕಿರಿಬಾತಿಯ ನಂತರ 15 ನಿಮಿಷಗಳ ಅಂತರದಲ್ಲಿ ನ್ಯೂಜಿಲೆಂಡ್​ನ ಚಾಥಮ್ ದ್ವೀಪಗಳಲ್ಲಿ ಬೆಳಿಗ್ಗೆ 5.15ಕ್ಕೆ ಹೊಸ ವರ್ಷಾಚರಣೆ ಆರಂಭವಾಗಿದೆ. ಇದರ ನಂತರ ನ್ಯೂಜಿಲೆಂಡ್ ಮತ್ತು ಟೋಕೆಲಾವ್ ಮತ್ತು ಟೋಂಗಾದಂತಹ ಹಲವಾರು ಪೆಸಿಫಿಕ್ ದ್ವೀಪಗಳಲ್ಲಿ ಜನವರಿ 1ನೇ ತಾರೀಕು ಉದಯಿಸಿದೆ.

ಹವಾಯಿ, ಅಮೆರಿಕನ್ ಸಮೋವಾ ಮತ್ತು ಹಲವಾರು ಯುಎಸ್ ಪ್ರದೇಶಗಳು ಬಹಳ ತಡವಾಗಿ ಹೊಸ ವರ್ಷಕ್ಕೆ ಕಾಲಿಡಲಿವೆ. 38 ವಿಭಿನ್ನ ಸ್ಥಳೀಯ ಸಮಯಗಳು ಬಳಕೆಯಲ್ಲಿದ್ದು, ಹೊಸ ವರ್ಷವು ಎಲ್ಲಾ ಸಮಯ ವಲಯಗಳನ್ನು ವ್ಯಾಪಿಸಲು 26 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

2025ನ್ನು ಯಾವ ದೇಶಗಳು ಯಾವಾಗ ಪ್ರವೇಶಿಸುತ್ತವೆ?

ಮಧ್ಯಾಹ್ನ 3.30 (IST) : ಕಿರಿಬಾತಿ

ಸಂಜೆ 4.30 (IST) : ನ್ಯೂಜಿಲೆಂಡ್

ಸಂಜೆ 5.30 (IST) : ಫಿಜಿ, ರಷ್ಯಾದ ಸಣ್ಣ ಪ್ರದೇಶಗಳು

ಸಂಜೆ 6.30 (IST) : ಆಸ್ಟ್ರೇಲಿಯಾದ ಮುಶ್

ರಾತ್ರಿ 8.30 (IST) : ಜಪಾನ್, ದಕ್ಷಿಣ ಕೊರಿಯಾ

ರಾತ್ರಿ 9.30 (IST) : ಚೀನಾ, ಮಲೇಷ್ಯಾ, ಸಿಂಗಾಪುರ್, ಹಾಂಗ್ ಕಾಂಗ್, ಫಿಲಿಪೈನ್ಸ್

ಭಾರತ, ಶ್ರೀಲಂಕಾ (ಜಿಎಂಟಿಗಿಂತ 5 ಗಂಟೆ 30 ನಿಮಿಷ ಮುಂಚಿತವಾಗಿ)

1.30 ಬೆಳಗ್ಗೆ (IST) : ಯುಎಇ, ಒಮಾನ್, ಅಜೆರ್ ಬೈಜಾನ್

3.30 ಬೆಳಗ್ಗೆ (IST) : ಗ್ರೀಸ್, ದಕ್ಷಿಣ ಆಫ್ರಿಕಾ, ಸೈಪ್ರಸ್, ಈಜಿಪ್ಟ್, ನಮೀಬಿಯಾ

4.30 ಬೆಳಗ್ಗೆ (IST) : ಜರ್ಮನಿ, ಫ್ರಾನ್ಸ್, ಇಟಲಿ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, ಮೊರಾಕೊ, ಕಾಂಗೋ, ಮಾಲ್ಟಾ

5.30 ಬೆಳಗ್ಗೆ (IST) : ಯುಕೆ, ಐರ್ಲೆಂಡ್, ಪೋರ್ಚುಗಲ್

8.30 ಬೆಳಗ್ಗೆ (IST) : ಬ್ರೆಜಿಲ್, ಅರ್ಜೆಂಟೀನಾ, ಚಿಲಿ

9.30 ಬೆಳಗ್ಗೆ (IST) : ಪೋರ್ಟೊ ರಿಕೊ, ಬರ್ಮುಡಾ, ವೆನೆಜುವೆಲಾ, ಯುಎಸ್ ವರ್ಜಿನ್ ಐಲ್ಯಾಂಡ್ಸ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್

10.30 ಬೆಳಗ್ಗೆ (IST) : ಯುಎಸ್ ಈಸ್ಟ್ ಕೋಸ್ಟ್ (ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಇಟೆಕ್,) ಪೆರು, ಕ್ಯೂಬಾ, ಬಹಾಮಾಸ್

11.30 ಬೆಳಗ್ಗೆ (IST) : ಮೆಕ್ಸಿಕೊ, ಕೆನಡಾ ಮತ್ತು ಯುಎಸ್ನ ಕೆಲವು ಭಾಗಗಳು

1.30 ಮಧ್ಯಾಹ್ನ (IST) : ಯುಎಸ್ ವೆಸ್ಟ್ ಕೋಸ್ಟ್ (ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ, ಇತ್ಯಾದಿ)

3.30 ಮಧ್ಯಾಹ್ನ(IST) : ಹವಾಯಿ, ಫ್ರೆಂಚ್ ಪಾಲಿನಿಸಾ

4.30 ಸಂಜೆ (IST) : ಸಮೋವಾ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!