ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ ಉತ್ತರ ಮತಕ್ಷೇತ್ರದ ಜನರಿಗೆ ಕಾಂಗ್ರೆಸ್ ಮಲತಾಯಿ ಧೋರಣೆ ಮಾಡಿದ್ದಾರೆ. ಚಂದು ಪಾಟೀಲ್ ಅಧಿಕಾರಕ್ಕೆ ಗೆದ್ದರೆ ಧರ್ಮ ಆಪತ್ತಿನಲ್ಲಿ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬರಿ ಸುಳ್ಳು ಸುದ್ದಿ ಹರಡಿಸುವುದು ಬಿಟ್ಟರೇ ಅವರಿಗೆ ಬೇರ ಯಾವ ಕೆಲಸವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಹೇಳಿದರು.
ಉತ್ತರ ಮತಕ್ಷೇತ್ರದ ಶಹಾಬಜಾರ್,ನ ವಾಡ೯ ನಂಬರ 10ರ ವಿವಿಧ ಬೂತ್,ಗಳಲ್ಲಿ ಚುನಾವಣೆ ಪ್ರಚಾರ ವೇಳೆ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಎಂಬುದು ಕುತಂತ್ರದಿಂದ ಕೂಡಿದೆ. ಅವರ ಭರವಸೆಗಳನ್ನು ನಂಬಬೇಡಿ. ಜನರ ದಾರಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಎನೇ ವಾಗ್ದಾನ ನೀಡಿದರು ನಂಬಬೇಡಿ. ಸತತವಾಗಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಯಾಕೆ ಮೂಲಭೂತ ಸೌಕರ್ಯಗಳನ್ನು ನೀಡಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ ಬಾರಿ ನೀಡಿದ ಮತಗಳ ಋಣ ತೀರಿಸಲು ಸುಮಾರು 100 ಕೋಟಿ ಕೆಲಸ.ಮಾಡಿದ್ದೇನೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ಸಹಾಯದಿಂದ ಇಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ.ಮಾಡಲು ಅನುಕೂಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ನಿಮ್ಮ ಮನೆಯ ಮಗನೆಂದು ಭಾವಿಸಿ ಮತ ಹಾಕಿ. ನಾನು ಗೆದ್ದರೆ ತಾವು ಎಲ್ಲಿ ಕರೆದರೂ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಅಶೋಕ್ ಮಾನಕರ, ಶಿವಪುತ್ರಪ್ಪಾ ತಂಬಾಕೋಡಿ,ಮಲ್ಲಿಕಾರ್ಜುನ ಖೇಮಜಿ,ಶಿವಾನಂದ ಬಂಡಕ್,ಮಹೇಶ್ ಪಟ್ಟಣ,ಶಾಂತಕುಮಾರ ಬಿರಾದಾರ, ಶಾಂತಕುಮಾರ ಖೇಮಜಿ,ಈಶ್ವರ ಕಲ್ಲೂರ್,ಮಹಾಂತೇಶ ಬಿದನೂರು ಇತರರು ಉಪಸ್ಥಿತರಿದ್ದರು.