Sunday, June 4, 2023

Latest Posts

ಕೊಡಗಿನಲ್ಲಿ ತಂಪೆರೆದ ಮಳೆರಾಯ: ರೈತರು ಫುಲ್ ಖುಷ್!

ಹೊಸದಿಗಂತ ವರದಿ,ಡಿಕೇರಿ:

ಮಕೊಡಗು‌ ಜಿಲ್ಲೆಯ ಹಲವೆಡೆ ಶುಕ್ರವಾರ ಅಪರಾಹ್ನ ಹಗುರದಿಂದ ಸಾಧಾಸರಣ ಮಳೆಯಾಗಿದೆ.

ನಾಪೋಕ್ಲು,‌ ಮೂರ್ನಾಡು,‌ಪಾರಾಣೆ ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಕಾದ ಭೂಮಿಗೆ ತಂಪೆರೆದಿದೆ. ಇದರಿಂದ ರೈತರೂ‌ ಸಂತಸಗೊಂಡಿದ್ದಾರೆ.

ಕಳೆದ ಕೆಲವು ಜಿಲ್ಲೆಯಲ್ಲಿ‌ ಬಿಸಿಲ ಧಗೆ ಹೆಚ್ಚಿದ್ದು ಬಹುತೇಕ ಕಾಫಿಯ ತೋಟಗಳಲ್ಲಿ ಕಾಫಿಯ ಗಿಡಗಳು ಬಿಸಿಲಿನ ಝಳಕ್ಕೆ ಒಣಗಿದ್ದವು. ಈ ವರ್ಷ ಕಾಫಿ ಹೂವು ಬಿಡುವ ಸಮಯದಲ್ಲಿ ಮಳೆಯಾಗದೆ ಪರಿತಪಿಸುತ್ತಿದ್ದ ರೈತರು ಶುಕ್ರವಾರ ಸುರಿದ ಮಳೆಯ ಸಿಂಚನದಿಂದ ಸಮಾಧಾನ ಪಟ್ಟಿದ್ದಾರೆ. ಕಾಫಿ ಹಾಗೂ ಕಾಳು ಮೆಣಸಿನ ಬಳ್ಳಿಗಳಿಗೆ ಬೇಸಿಗೆ ಈ ಅವಧಿಯಲ್ಲಿ ಉತ್ತಮ ಮಳೆ ಅವಶ್ಯಕತೆ ಇದ್ದು, ಈ ವರ್ಷ ಮಳೆಯಿಂದ ವಂಚಿತರಾಗಿದ್ದ ಬೆಳೆಗಾರರಿಗೆ ಮಳೆ ಖುಷಿ ತಂದಿದೆ. ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ. ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇದೀಗ ಸುರಿದ ಮಳೆ ಜನರ ಬವಣೆಯನ್ನು ಕೊಂಚಮಟ್ಟಿಗೆ ದೂರ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!