ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ನಡುವೆ ಸುದ್ದಿವಾಹಿನಿಗಳು ಮತ್ತು ಕೆಲ ಯೂಟ್ಯೂಬ್ ಚಾನೆಲ್ ಗಳ ತಮ್ಮ ಕಾರ್ಯಕ್ರಮಗಳಲ್ಲಿ ಸೈರನ್ ಶಬ್ದವನ್ನು ಬಹಳ ಮಾಡುತ್ತಿದ್ದು ಇದೀಗ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ.
ಸಮುದಾಯ ಜಾಗೃತಿ ಅಭಿಯಾನಗಳನ್ನು ಹೊರತುಪಡಿಸಿ ಮಾಧ್ಯಮಗಳು ತಮ್ಮ ಟಿವಿ ಕಾರ್ಯಕ್ರಮಗಳಲ್ಲಿ ವಾಯುದಾಳಿಯ ( ವೇಳೆ ಮೊಳಗಿಸಲಾಗುವ ನಾಗರಿಕ ರಕ್ಷಣಾ ಸೈರನ್‌ಗಳ ಶಬ್ದಗಳನ್ನು ಬಳಸದಂತೆ ಎಲ್ಲಾ ಮಾಧ್ಯಮ ವಾಹಿನಿಗಳಿಗೆ ಆದೇಶ ನೀಡಿದೆ.
ನಾಗರಿಕ ರಕ್ಷಣಾ ಕಾಯ್ದೆ, 1968ರ ಅಡಿಯಲ್ಲಿ ಹೊರಡಿಸಲಾದ ಈ ಸೂಚನೆ, ಸೈರನ್ ಶಬ್ದಗಳನ್ನು ಆಗಾಗ ಟಿವಿಗಳಲ್ಲಿ ಬಳಸುವುದರಿಂದ ಸಾರ್ವಜನಿಕರ ಸಂವೇದನೆ ಕಡಿಮೆಯಾಗುತ್ತದೆ. ನಿಜವಾದ ವಾಯುದಾಳಿಯ ಸಮಯದಲ್ಲಿ ಸೈರನ್ ಮೊಳಗಿಸಿದಾಗಲೂ ಇದರಿಂದ ಜನರ ಗೊಂದಲಕ್ಕೆ ಕಾರಣವಾಗಬಹುದು ಎಂದು ನಿರ್ದೇಶನಾಲಯ ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ನಿರ್ದೇಶನಾಲಯ ತಿಳಿಸಿದೆ.
ಸೈರನ್‌ಗಳ ನಿಯಮಿತ ಬಳಕೆಯು ವಾಯುದಾಳಿಗಳ ಸೈರನ್‌ಗಳ ಬಗ್ಗೆ ನಾಗರಿಕರ ಸೂಕ್ಷ್ಮತೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಮತ್ತು ನಿಜವಾದ ವಾಯುದಾಳಿಗಳ ಸಮಯದಲ್ಲಿ ಕೂಡ ನಾಗರಿಕರು ಇದನ್ನು ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುವ ಮಾಮೂಲಿ ಶಬ್ದ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಹೀಗಾಗಿ, ಅಂತಹ ಶಬ್ದಗಳನ್ನು ಟಿವಿ ಕಾರ್ಯಕ್ರಮ ಅಥವಾ ನ್ಯೂಸ್ಗಳಲ್ಲಿ ಬಳಸುವಂತಿಲ್ಲ ಎಂದು ಹೇಳಿದೆ.