HEALTH | ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆ ಚೆನ್ನಾಗಿ ಆಗ್ಬೇಕಾ? ಹಾಗದ್ರೆ ಈ ಆಹಾರಗಳು ನಿಮ್ಮ ತಟ್ಟೆಯಲ್ಲಿರಲಿ

ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯ ಬಹಳ ಮುಖ್ಯವಾಗಿರುತ್ತದೆ. ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇದು ತಾಯಿಯ ಆರೋಗ್ಯ ಹಾಗೂ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಪೂರಕವಾಗಿದೆ.

ಇವತ್ತು ಗರ್ಭಾವಸ್ಥೆಯಲ್ಲಿ ತಾಯಿಯು ಸೇವಿಸಬೇಕಾದ ಕೆಲವು ಮುಖ್ಯ ಆಹಾರ ಹಾಗೂ ಪಾನೀಯಗಳ ಕುರಿತು ತಿಳಿದುಕೊಳ್ಳೋಣ.

ಎಳನೀರು
ಗರ್ಭಾವಸ್ಥೆಯಲ್ಲಿ ಎಳನೀರು ಬಹಳ ಪ್ರಯೋಜನಕಾರಿಯಾಗಿದೆ. ಎಳನೀರು ಫೈಬರ್ ಹಾಗೂ ಪ್ರೋಟೀನ್ ಜೊತೆಗೆ ಇದರಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಂ, ಸೋಡಿಯಂ, ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ.

ಸಿಹಿಗೆಣಸು
ಗರ್ಭಿಣಿಯರು ಸಿಹಿಗೆಣಸು ಸೇವಿಸುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಎ, ಬಿ 6 ಮತ್ತು ಸಿ ಅನ್ನು ಹೊಂದಿರುತ್ತದೆ. ಭ್ರೂಣದ ಬೆಳವಣಿಗೆಗೆ ವಿಟಮಿನ್ ಎ ಅತ್ಯಗತ್ಯ. ಮೂಳೆಗಳು ಮತ್ತು ಸ್ನಾಯುರಜ್ಜುಗಳ ಬೆಳವಣಿಗೆಗೆ ಇದು ಉತ್ತಮವೆಂದು ಪರಿಗಣಿಸಲಾಗಿದೆ.

ಹಣ್ಣುಗಳು
ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಹೀಗಾಗಿ ಹೆಚ್ಚು ಹೆಚ್ಚು ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಪಪ್ಪಾಯಿ, ಅನಾನಸ್ ಇತ್ಯಾದಿ ಹಣ್ಣುಗಳನ್ನು ತಿನ್ನದಿರಿ.

ಮೊಳಕೆ ಕಾಳುಗಳು
ಇವುಗಳಲ್ಲಿ ಕಬ್ಬಿಣ ಹಾಗೂ ಫೈಬರ್ ಅನ್ನು ಹೊಂದಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಮಲಬದ್ಧತೆಯು ಸಾಮಾನ್ಯವಾಗಿದ್ದು, ಮೊಳಕೆ ಕಾಳಿನಲ್ಲಿ ಫೈಬರ್ ಅಂಶವಿರುವುದರಿಂದ ಮಲಬದ್ಧತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!