ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ನೀಡಿದ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.
ಅವರು ಹೇಳುವಂತೆ, ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಮಾಡಿಕೊಂಡರೂ ಚಿಂತೆ ಇಲ್ಲ ಎಂದಿದ್ದಾರೆ.
ಜಯಾ ಬಚ್ಚನ್ ತಮ್ಮ ಮಗಳು ಶ್ವೇತಾ ಬಚ್ಚನ್ ನಂದಾ ಅವರ ಪುತ್ರಿ ನವ್ಯ ನವೇಲಿ ನಂದಾರ ಪಾಡ್ ಕಾಸ್ಟ್ ನಲ್ಲಿ ಮಾತನಾಡುವ ಜೀವನದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಮೊಮ್ಮಗಳು ಮದುವೆಗೂ ಮುನ್ನ ಮಗು ಮಾಡಿಕೊಂಡರೆ ಚಿಂತೆ ಇಲ್ಲ ಎಂದು ಹೇಳಿರುವ ಜಯಾ ಬಚ್ಚನ್, ಸಂಬಂಧ ದೀರ್ಘಕಾಲ ಉಳಿಯಬೇಕೆಂದರೆ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಮುಖ್ಯವಾಗುತ್ತದೆ ಎಂದಿದ್ದಾರೆ. ಜೊತೆಗೆ ತಮ್ಮ ಈ ಮಾತು ವಿವಾದಕ್ಕೂ ಕಾರಣವಾಗಬಹುದು ಎಂದು ಮೊದಲೇ ಊಹಿಸಿದ್ದಾರೆ.